ಬೆಂಗಳೂರು: ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದರು.
ಮತ್ತೊಂದೆಡೆ ವಸಂತ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ನೆಫೆಡ್ ಕಚೇರಿ ಮುಂಭಾಗದಲ್ಲಿ ಭಾರತ್ ಅಕ್ಕಿ ಮಾರಟ ವಾಹನಗಳಿಗೆ ಚಾಲನೆ ನೀಡಲಾಗಿದೆ. ಎಫ್ಸಿಐ ಚೆರ್ಮನ್ ಭೂಪೇಂದ್ರ ಸಿಂಗ್ ಬಾಟಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಒಟ್ಟು 7 ವಾಹನಗಳಿಗೆ ಚಾಲನೆ ನೀಡಿದರು.
ಅಕ್ಕಿ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. ನಾಫೆಡ್-ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಇಂದು ನಾಫೆಡ್ನ 7 ಸಂಚಾರಿ ವಾಹನಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತದೆ.
ಭಾರತ್ ಅಕ್ಕಿ ಯೋಜನೆಯಡಿ ಕೆಜಿ ಭಾರತ್ ಅಕ್ಕಿಗೆ 29 ರೂ. ನಿಗದಿ ಪಡಿಸಲಾಗಿದ್ದು, 5 ಕೆಜಿ, 10 ಕೆಜಿ ಬ್ಯಾಗ್ಗಳಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಲಭ್ಯವಿದೆ. ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದ್ದು, ನಾಳೆಯಿಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಲಭ್ಯವಾಗಲಿದೆ.
ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ಇ – ಕಾಮರ್ಸ್ ತಾಣಗಳಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ. ‘ಭಾರತ್’ ಅಕ್ಕಿ 5 ಕೆ.ಜಿ, 10 ಕೆ.ಜಿ ಪ್ಯಾಕೆಟ್ಗಳಲ್ಲಿ ಮಾರಾಟಗೊಳ್ಳಲಿದ್ದು, ಪ್ರತಿ ಕಿ.ಲೋಗೆ 29 ರೂ. ನಿಗದಿ ಪಡಿಸಲಾಗಿದೆ ಎಂದು ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದಾರೆ.