ಭೀಕರ ರಸ್ತೆ ಅಪಘಾತದಿಂದ ಪಾರಾದ ಖ್ಯಾತ ಬಾಲಿವುಡ್ ನಟಿ: ಮತ್ತಿಬ್ಬರು ಸಾವು

ಬಾಲಿವುಡ್ ಖ್ಯಾತ ನಟಿ ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಪ್ರಯಾಣಿಸುತ್ತಿದ್ದ ಕಾರು ಇಟಲಿಯಲ್ಲಿ ಅಪಘಾತವಾಗಿದೆ. ವರದಿಗಳ ಪ್ರಕಾರ ಈ ರಸ್ತೆ ಅಪಘಾತದಲ್ಲಿ ವೃದ್ದ ದಂಪತಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿಯನ್ನು ಸ್ವತಃ ನಟಿಯೇ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸರಣಿಯ ಅಪಘಾತದಲ್ಲಿ ಮತ್ತೊಂದು ಕಾರಿನಲ್ಲಿ ಇದ್ದ ಇಬ್ಬರು ಮೃತಪಟ್ಟಿದ್ದಾರೆ. ಫೆರಾರಿ ಕಾರಿಗೆ ಬೆಂಕಿ ಹೊತ್ತಿಕೊಂಡು ಸ್ವಿಸ್ ದಂಪತಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗಾಯತ್ರಿ ಜೋಶಿ ಅವರು 2004ರಲ್ಲಿ ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಸ್ವದೇಶ್’ ಚಿತ್ರದಲ್ಲಿ ನಟಿಸಿದರು. ಅವರು ಅಭಿನಯಿಸಿದ ಏಕೈಕ ಸಿನಿಮಾ ಇದು. ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಗಾಯತ್ರಿ 2005ರಲ್ಲಿ ವಿಕಾಸ್ ಅವರನ್ನು ವರಿಸಿದರು. ಆ ಬಳಿಕ ಚಿತ್ರರಂಗದಿಂದ ದೂರವೇ ಉಳಿದರು. ಈಗ ಅವರು ಪತಿಯ ಜೊತೆ ಇಟಲಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

Font Awesome Icons

Leave a Reply

Your email address will not be published. Required fields are marked *