ರಾಜಸ್ಥಾನ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಿಕೆನರ್ನಲ್ಲಿ ನಡೆದಿದೆ.
ಮೃತ ನಾಲ್ವರು ಕೂಡ ಡಾಕ್ಟರ್ ಆಗಿದ್ದರು. ಡಾಕ್ಟರ್ ಪ್ರತೀಕ್, ಇವರ ಪತ್ನಿ ಡಾಕ್ಟರ್ ಹೇಟಲ್, ಡಾಕ್ಟರ್ ಪೂಜಾ ಇವರ ಪತಿ ಡಾ. ಕರಣ್ ಮೃತ ದುರ್ದೈವಿಗಳು. ಪೂಜಾ ಮತ್ತು ಕರಣ್ ಅವರ 18 ತಿಂಗಳ ಮಗು ಕೂಡ ಸಾವನ್ನಪ್ಪಿದೆ.
ಬಿಕೆನರ್ನ ಭರತ್ಮಲಾ ಹೈವೇನಲ್ಲಿ SUV ವಾಹನ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದೆ.
ಇವರು ಗುಜರಾತ್ನ ಕಚ್ ನಿವಾಸಿಗಳಾಗಿದ್ದರು. ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದರು, ವಾಪಸ್ ಆಗುವ ವೇಳೆ ದುರ್ಘಟನೆ ಸಂಭವಿಸಿದೆ.
ಅಪಘಾತಕ್ಕೆ ಒಳಗಾಗಿರುವ ವೈದ್ಯಾಧಿಕಾರಿಗಳ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.