ಮಂಗಳೂರು: ನಗರದಲ್ಲೂ ಟಿಪ್ಪು ಸುಲ್ತಾನ್ ಕಟ್ ಔಟ್ ವಿವಾದ ಹುಟ್ಟಿಕೊಂಡಿದೆ. ಹೌದು. . ಮಂಗಳೂರಿನ ಹರೇಕಳ ಎಂಬಲ್ಲಿ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಕಟ್ ಔಟ್ ನಿಲ್ಲಿಸಿದ್ದರು. ಇದನ್ನು ತೆರವುಗೊಳಿಸಲು ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಈ ನೋಟಿಸ್ ಅನ್ನು ಖಂಡಿಸಿ ಡಿವೈಎಫ್ಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿವೈಎಫ್ಐ ಸಂಘಟನೆಯ ರಾಜ್ಯ ಸಮ್ಮೇಳನದ ಪ್ರಯುಕ್ತ ವಿವಿಧ ವೀರ ಯೋಧರ, ಸ್ವತಂತ್ರ ಸೇನಾನಿಗಳ ಫ್ಲೆಕ್ಸ್ ಕಟ್ ಔಟ್ ಅಳವಡಿಸಿದ್ದರು. ಕಟ್ ಔಟ್ ಅಳವಡಿಸಿದ ಬೆನ್ನಲ್ಲೇ ತೆರವುಗೊಳಿಸಲು ಪೊಲೀಸರು ನೋಟಿಸ್ ನೀಡಿದ್ದಾರೆ. ಆದರೆ ಕಟ್ ಔಟ್ ತೆರವುಗೊಳಿಸಲು ಡಿವೈಎಫ್ ಐ ಕಾರ್ಯಕರ್ತರು ನಕಾರ ಮಾಡಿದ್ದಾರೆ.
ಟಿಪ್ಪು ಸುಲ್ತಾನ್ ಕಟ್ ಔಟ್ ಅಳವಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧವಿದೆಯೇ ಎಂದು ಪ್ರಶ್ನೆ ಹಾಕಿದ್ದಾರೆ. ಅಲ್ಲದೇ ನಿಷೇಧ ಹೇರಿದ ಸರಕಾರ ಯಾವುದು ? ದಕ್ಷಿಣ ಕನ್ನಡ ಜಿಲ್ಲೆಯಲಿ ಇನ್ನೂ ಬಿಜೆಪಿ ಸರಕಾರ ಇದೆಯಾ ..? ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ಪೊಲೀಸರಿಂದ ಸಂಘಿ ಮನಸ್ಥಿತಿಯಿಂದ ಕೆಲಸ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಕಟ್ ಔಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಎಲ್ಲಾ ಮಹಾತ್ಮರ ಬ್ಯಾನರ್ ಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಲ್ಲುತ್ತಾರೆ ಎಂದು ಡಿವೈಎಫ್ಐ ಮುಖಂಡ ಇಮ್ತಿಯಾಜ್ ಪ್ರಕಟಣೆ ಹೊರಡಿಸಿದ್ದಾರೆ.