ಮಂಗಳೂರು: ಫೆಂಗಲ್ ಚಂಡಮಾರುತದ ಅಬ್ಬರದಿಂದ ಭಾರೀ ಮಳೆ ಹಿನ್ನೆಲೆ ನೆರೆ ಪೀಡಿತ ಪ್ರದೇಶಗಳಲ್ಲಿ ಸ್ಪೀಕರ್ ಯು.ಟಿ.ಖಾದರ್ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ತಾಲೂಕಿನ ಕಿನ್ಯಾ, ತಲಪಾಡಿ ಭಾಗದಲ್ಲಿ ಖಾದರ್ ರೌಂಡ್ಸ್ ಹಾಕಿದ್ದು, ಕೇರಳ ಗಡಿ ಭಾಗದ ಕಿನ್ಯಾದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.
ಮಳೆಯಿಂದಾಗಿ ಹಲವೆಡೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿದೆ. ಅನಾಹುತ ನಡೆದ ಜಾಗಗಳಿಗೆ ತೆರಳಿ ಅಧಿಕಾರಿಗಳಿಗೆ ಖಾದರ್ ಸೂಚನೆ ನೀಡಿದ್ದಾರೆ.