ಮಂಗಳೂರು: ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಶಕ್ತಿ ಫೆಸ್ಟ್ ೨೦೨೪ನ್ನು ದೀಪ ಬೆಳಗಿಸುವುದರ ಮೂಲಕ ಕಾಸರಗೋಡು ಜಿಲ್ಲೆಯ ಕುಂಬ್ಲೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಶಶಿಧರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಒಂದು ಮನೆಯನ್ನು ಕಟ್ಟಿದ ಕೂಡಲೇ ಅದು ವಾಸಕ್ಕೆ ಯೋಗ್ಯ ಎಂದು ಕಾಣಬಹುದು.
ನಿಜವಾಗಿ ನೋಡಿದರೆ ಅದರಲ್ಲಿ ವಾಸ ಮಾಡಿದಾಗ ಮಾತ್ರ ಅದರ ನಿಜವಾದ ಯೋಗ್ಯ ಸ್ಥಿತಿ ಗೊತ್ತಾಗುವುದು ಅದೇ ತರ ಒಂದು ಸಂಸ್ಥೆಯನ್ನು ಕಟ್ಟಿದಾಗ ಅದು ಸುಂದರವಾಗಿ ಕಾಣಬಹುದು, ಆದರೆ ಆ ಕಟ್ಟಡದ ಒಳಗಡೆ ನಿಜವಾದ ಮೌಲ್ಯಯುತ್ತ ಶಿಕ್ಷಣವನ್ನು ನೀಡಿದಾಗ ಮಾತ್ರ ಆ ಸಂಸ್ಥೆಯಲ್ಲಿ ಒಳ್ಳೆಯ ವಿದ್ಯಾರ್ಥಿಯ ನಿರ್ಮಾಣವಾಗುತ್ತದೆ. ಆಗ ಆ ಸಂಸ್ಥೆಯ ಮಹತ್ವ ಗೊತ್ತಾಗುತ್ತದೆ.ಇಂತಹ ಸುಂದರವಾಗಿರುವ ಸಂಸ್ಥೆಯನ್ನು ನಿರ್ಮಾಣ ಮಾಡಿ ಸಂಸ್ಕಾರಯುತ ಶಿಕ್ಷಣವನ್ನು ಶಕ್ತಿ ವಿದ್ಯಾ ಸಂಸ್ಥೆಯು ನೀಡುತ್ತಿದೆ ಎಂಬುದನ್ನು ನಾನು ಇಲ್ಲಿ ಕಣ್ಣಾರೆ ಕಂಡಿರುತ್ತೇನೆ. ಈ ಕಾರಣಕೋಸ್ಕರ ಸಂಸ್ಥೆಯ ಸಂಸ್ಥಾಪಕರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.
ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ಬಿಎಸ್ಬಿಎಸ್ ಸಂಸ್ಥೆಯ ಉಪಾಧ್ಯಕ್ಷರಾದ ವಿನಯ ವಿ. ಜಾದವ್ ಮಾತನಾಡಿ ನಾವು ಮುಂದಿನ ದಿನಗಳಲ್ಲಿ ಕೇವಲ ಅಂಕಗಳಿಸಿದರೆ ಮಾತ್ರ ಸಾಧನೆ ಮಾಡುತ್ತೇವೆ ಎಂದು ತಿಳಿದುಕೊಳ್ಳಬಾರದು. ಪ್ರತಿಷ್ಠಿತ ಕಂಪೆನಿಗಳು ವಿದ್ಯಾರ್ಥಿಗಳಲ್ಲಿರುವ ಇತರೆ ನಾಯಕತ್ವ ಗುಣವನ್ನು ಗುರುತಿಸಿ ಕೆಲಸ ಕೊಡುವ ಹಂತಕ್ಕೆ ಬಂದಿರುತ್ತದೆ. ನಾವು ಅಂಕ ಗಳಿಸುವುದರ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ನಾವು ಹೇಗೆ ಬೇರೆ ಜನರ ಜೊತೆ ವರ್ತಿಸುತ್ತೇವೆ ಎಂಬುದು ಇವತ್ತಿನ ದಿನಗಳಲ್ಲಿ ಮುಖ್ಯವಾಗುತ್ತದೆ. ನಾವು ನಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ನಮ್ಮ ಕೌಶಲ್ಯಗಳಿಂದಲೇ ನಾವು ಒಳ್ಳೆಯ ಉದ್ಯೋಗ ಪಡೆಯಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ ಶಕ್ತಿ ಪದವಿ ಪೂರ್ವ ಕಾಲೇಜು ಪ್ರತಿ ವರ್ಷವು ಶಕ್ತಿ ಫೆಸ್ಟ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ. ಇದರ ಉದ್ದೇಶ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಆಗಿದೆ. ನಮ್ಮ ದೇಶದ ಯುವ ಜನತೆಯಲ್ಲಿ ಅನೇಕ ಕೌಶಲ್ಯಗಳಿವೆ. ಅದನ್ನು ಹುಡುಕುವ ಕೆಲಸವನ್ನು ಸರ್ಕಾರವು ಮಾಡುತ್ತಿದೆ ಅದರ ಜೊತೆ ಶಕ್ತಿ ವಿದ್ಯಾ ಸಂಸ್ಥೆಯು ಮಾಡುತ್ತಾ ಬರುತ್ತಿದೆ. ಇಂತಹ ಫೆಸ್ಟ್ ಅನೇಕ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನೈಆಕ್ ವಹಿಸಿ ಶುಭ ಹಾರೈಸಿದರು.
ಶಕ್ತಿ ಫೆಸ್ಟ್ನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ಲವರ್ ಆರೆಂಜ್ಮೆಂಟ್, ಫೇಸ್ ಪೇಯಿಟಿಂಗ್, ಪ್ರೊಡಕ್ಟ್ ಲಾಂಚ್, ಸೋಲೊ ಸಿಂಗಿಂಗ್, ವೆರೈಟಿ ಎಂಟರ್ಟೈನ್ಮೆಂಟ್, ರಂಗೋಲಿ, ರೀಲ್ ಮೇಕಿಂಗ್ ಸ್ಪರ್ಧೆಗಳು ಮತ್ತು ಶಾಲಾ ವಿಭಾಗದಲ್ಲಿ ಫೋಕ್ ಡ್ಯಾನ್ಸ್, ಪೋಸ್ಟರ್ ಮೆಕಿಂಗ್, ಪೆನ್ಸಿಲ್ ಸ್ಕೆಚ್, ಸೈನ್ಸ್ ಮೊಡಲ್, ಟ್ರಜರ್ ಹಂಟ್, ಸೋಲೋ ಸಿಂಗಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆ ಮೇಲೆ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭೌತಶಾಸ್ತ್ರ ಉಪನ್ಯಾಸಕಿ ಸ್ವಪ್ನ ಕೆ. ನಿರೂಪಿದರು. ಜೀವಶಾಸ್ತ್ರ ಉಪನ್ಯಾಸಕಿ ಚೈತ್ರ ಸ್ವಾಗತ ಕೋರಿದರು.