ಮಂತ್ರ-ಮಾಂಗಲ್ಯ ಪದ್ಧತಿಯಲ್ಲಿ ಕರ್ನಾಟಕದ ಸೊಸೆ‌ ಆಗುತ್ತಿದ್ದಾರೆ ಪೂಜಾ ಗಾಂಧಿ

ಬೆಂಗಳೂರು: ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ. ತಾನು ಪ್ರೀತಿಸಿದ ಯುವಕನ ಜೊತೆಗೆ ಹಸೆಮಣೆ ಏರಲು ಮುಂದಾಗಿದ್ದಾರೆ.

ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಭೇಷ್ ಎನಿಸಿಕೊಂಡಿದ್ದಾರೆ. ಒಂದ್ ಟೈಮ್​ನಲ್ಲಿ ಕನ್ನಡದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದ ನಟಿಮಣಿ ಮತ್ತು ರಾಜಕಾರಣಕ್ಕೂ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡಿಗನ ಕೈ ಹಿಡಿದು ಕರ್ನಾಟಕದ ಸೊಸೆ‌ ಆಗಲು ಉತ್ತರ ಭಾರತದ ಬೆಡಗಿ ಪೂಜಾ ಗಾಂಧಿ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಮಾಲೀಕ ವಿಜಯ್ ಅವರನ್ನು ವಿವಾಹವಾಗ್ತಿದ್ದಾರೆ. ಪೂಜಾ ಗಾಂಧಿ- ವಿಜಯ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ-ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಲಿದ್ದಾರೆ.

‘ತಾವೆಲ್ಲರೂ ಕ್ಷೇಮ ಎಂದು ಹಾರೈಸುತ್ತೇವೆ. ಈ ಕಾಗದದ ಬರೆಯುತ್ತಿರುವ ವಿಶೇಷ ಕಾರಣ ಏನೆಂದರೆ. ಶ್ರೀಮತಿ ಜ್ಯೋತಿ ಗಾಂಧಿಯವರು ಜೇಷ್ಠ ಪುತ್ರಿ ಪೂಜಾ ಗಾಂಧಿಯಾ ನಾನು ಮತ್ತು ದಿವಂಗತ ಶ್ರೀಮತಿ ಸೂರ್ಯಮನ್ನಾಜಿ ಘೂರ್ಪಡೆಯವರ ಮಗನಾದ ವಿಜಯ್ ಘೋರ್ಪಡೆ ಜೊತೆ 29-11-2023ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ನಮ್ಮ ಹಿತೈಷಿಗಳಾದ ತಾವು ಆಗಮಿಸಿ, ನಮ್ಮ ಆತಿಧ್ಯ ಸ್ವೀಕರಿಸಿ, ಆಶೀರ್ವಾದಿಸಿ, ನಮ್ಮಗಳ ಶ್ರೀಯೋಭಿವೃಧಿ ಕೋರಬೇಕೆಂದು ವಿಜ್ಞಾಪಿಸಿಕೊಳ್ಳುತ್ತೇವೆ’ ಎಂದು ನಟಿ ಪೂಜಾ ಗಾಂಧಿ ಪತ್ರ ಬರೆದಿದ್ದಾರೆ.

ಪೂಜಾ ಗಾಂಧಿ ಮೂಲತಃ ಬೆಂಗಾಲಿ ಕುಟುಂಬದವರು. ಹುಟ್ಟಿದ್ದು ಉತ್ತರಪ್ರದೇಶದ ಮೀರತ್‌, ಬೆಳೆದಿದ್ದು ಓದಿದ್ದು ದೆಹಲಿಯಲ್ಲಿ. ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಪೂಜಾ ಗಾಂಧಿ, ಇಲ್ಲಿ ಸಕ್ಸಸ್‌ ಪಡೆದುಕೊಂಡು ನೆಲೆ ನಿಂತವರು. ಕನ್ನಡದ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ ಮಳೆ ಹುಡುಗಿ ಪೂಜಾ ಗಾಂಧಿ.

 

Font Awesome Icons

Leave a Reply

Your email address will not be published. Required fields are marked *