ಮಂಗಳೂರು: ನ್ಯೂಸ್ ಕರ್ನಾಟಕ ಮತ್ತು ಮಾಂಡೋವಿ ಮೋಟರ್ಸ್ ಇದರ ಸಹಯೋಗದೊಂದಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮಕ್ಕಳಿಗಾಗಿ ಶ್ರೀರಾಮ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮ ಇಂದು ಯಶಸ್ವಿಯಾಗಿ ನಡೆಯಿತು.
ಇಂದು (ಶನಿವಾರ) ಮಧ್ಯಾಹ್ನ 3 ಗಂಟೆಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಾಂಡೋವಿ ಮೋಟರ್ಸ್ ಬಲ್ಮಠ ಮಂಗಳೂರು ಇಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗಣ್ಯರಾದ ಮಾಂಡೋವಿ ಮೋಟಾರ್ಸ್ ಅಸೋಸಿಯೇಟ್ ಉಪಾಧ್ಯಕ್ಷ ನೇರಂಕಿ ಪಾಶ್ವನಾಥ್, ಡಿಜಿಎಂ ಸೇಲ್ಸ್ ಮತ್ತು ಮಾರ್ಕೆಟಿಂಗ್ ಮಾಂಡೋವಿ ಮೋಟಾರ್ಸ್ ಶಶಿದರ್ ಕಾರಂತ್ , ಜೈದೀಪ್ ರೈ ಹಾಗೂ ಸ್ಪಿಯರ್ ಹೆಡ್ ಮೀಡಿಯಾದ ನಿರ್ದೇಶಕ ಬ್ರಿಜೇಶ್ ಗೋಖಲೆ ಭಾಗಿಯಾಗಿದ್ದರು.
ಈ ಸ್ಪರ್ಧೆಯಲ್ಲಿ 1 ರಿಂದ 11 ವರ್ಷದ ಮಕ್ಕಳಿಗೆ ಅವಕಾಶ ನೀಡಲಾಗಿತ್ತು. 1 ರಿಂದ 3 ವರ್ಷದ ಮಕ್ಕಳಿಗೆ ನಡೆದ ಶ್ರೀರಾಮನ ವೇಷದಲ್ಲಿ ಮೊದಲನೇ ಬಹುಮಾನ ಚಿರಾಂತ್ ದೇವಾಡಿಗ, ಎರಡನೇ ಬಹುಮಾನ ಆರಾಧ್ಯ ಎ, ಮೂರನೇ ಬಹುಮಾನ ಆಯನ್ಸ್ ದೇವಾಡಿಗ ಹಾಗೂ ಸಮಾಧಾನಕರ ಬಹುಮಾನವನ್ನು ಆರಾಧ್ಯ ಎನ್, ಸುಕನ್ಯ ಕಾಮತ್ ಮತ್ತು ಭಕ್ತಿದಾಸ್ ಪಡೆದುಕೊಂಡಿದ್ದಾರೆ.
4 ರಿಂದ 7 ವರ್ಷದ ಮಕ್ಕಳಿಗೆ 2 ನಿಮಿಷ ಶ್ರೀರಾಮನ ಕುರಿತಾದ ಮಾತುಗಾರಿಕೆಗೆ ಅವಕಾಶ ಇದ್ದು, ಇದರಲ್ಲಿ ಮೊದಲನೇ ಬಹುಮಾನ ಮನ್ವೀರ್ ಚಂದ್ರ, ಎರಡನೇ ಬಹುಮಾನ ಶ್ರೀಮ ಯು. ಆರ್ ಮೂರನೇ ಬಹುಮಾನ ಆರಾಧ್ಯ ಎ ಕಾಮತ್ ಹಾಗೂ ಸಮಾಧಾನಕರ ಬಹುಮಾನವನ್ನು ಓಂಕಾರ ಕಾಮತ್ ಪಡೆದುಕೊಂಡಿದ್ದಾರೆ.
8 ರಿಂದ 11 ವರ್ಷದ ಮಕ್ಕಳಿಗೆ 2 ನಿಮಿಷದ ಶ್ರೀರಾಮನ ಶ್ಲೋಕ ಪಠಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದರಲ್ಲಿ ಮೊದಲನೇ ಬಹುಮಾನ ರಿಯಾನ್ ಆರ್ ಕಾಮತ್, 2ನೇ ಬಹುಮಾನ ರುತ್ವ ಹೆಚ್. ಬಿ, 3ನೇ ಬಹುಮಾನ ರಿಶಿಕ್ ಹಾಗೂ ಸಮಾಧಾನಕರ ಬಹುಮಾನ ಸಾತ್ವಿಕ್ ಎಸ್. ಕುಮಾರ್ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ತೀರ್ಪುಗಾರರ ತೀರ್ಮಾನ ಅಂತಿಮವಾಗಿತ್ತು.
ಈ ಕಾರ್ಯಕ್ರಮ ನ್ಯೂಸ್ ಕರ್ನಾಟಕ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ ಬುಕ್ ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.