ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯನವರ ನೂತನ ಪ್ರತಿಮೆ ಮರು ಸ್ಥಾಪನೆ  

ಮಡಿಕೇರಿ: ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ. ಎಸ್ ತಿಮ್ಮಯ್ಯ ನವರ ನೂತನ ಪ್ರತಿಮೆಯನ್ನು ಇಂದು ಸಕಲ ಗೌರವದೊಂದಿಗೆ ಮಡಿಕೇರಿಯಲ್ಲಿ ಮರು ಸ್ಥಾಪಿಸಲಾಯಿತು.

ಜಿಲ್ಲಾಡಳಿತ, ನಗರಸಭೆ ಉಸ್ತುವಾರಿಯಲ್ಲಿ ನಿರ್ಮಾಣಗೊಂಡ ನೂತನ ವೃತ್ತದಲ್ಲಿ ಪ್ರತಿಮೆಯನ್ನು ಮರು ಸ್ಥಾಪಿಸಲಾಯಿತು. ಏರ್ ಮಾರ್ಷಲ್ ನಂದ ಕಾರ್ಯಪ್ಪ ನವರು ಪುಷ್ಪಾ ನಮನದ ಮೂಲಕ ಅನಾವರಣಗೊಳಿಸಿದರು. ಇದೇ ಸಂದರ್ಭ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು.

ಮೈಸೂರಿನಲ್ಲಿ ಸಜ್ಜುಗೊಂಡು ಶುಕ್ರವಾರ ಬೆಳಿಗ್ಗೆ ಮಡಿಕೇರಿಗೆ 11:30 ಗಂಟೆಗೆ ವಾಹನದಲ್ಲಿ ಆಗಮಿಸಿದ ಜನರಲ್  ತಿಮ್ಮಯ್ಯನವರ ಪ್ರತಿಮೆಯನ್ನು ಶಾಸಕರುಗಳಾದಿಯಾಗಿ ಸ್ವಾಗತಿಸಿದರು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಹಲವರು ಆಗಮಿಸಿ ಗೌರವ ನಮನವನ್ನು ಸಲ್ಲಿಸಿದರು. ಮಾಜಿ ಸೈನಿಕರು ಮೆರವಣಿಗೆ ಮೂಲಕ ಸಾಗಿ ಬಂದರು, ಬೈಕ್ ಜಾತ ಕೂಡ ಈ ಸಂದರ್ಭ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಎ.ಎಸ್ ಪೊನ್ನಣ್ಣ ಮಂತರ್,, ಗೌಡ, ಮಾಜಿ ಸಚಿವರಾದ ಎಂ. ಸಿ ನಾಣ್ಣಯ್ಯ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಜಿಲ್ಲಾಧಿಕಾರಿಗಳಾದ ವೆಂಕಟರಾಜ್,ಮಾಜಿ ಶಾಸಕ ಕೆಜಿ.ಬೋಪಯ್ಯ ವಿದಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜನರಲ್ ತಿಮ್ಮಯ್ಯ ಫೋರಂ ನ ಅಧ್ಯಕ್ಷರಾದ ಕರ್ನಲ್ ಕೆ. ಸುಬ್ಬಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬಿ.ಎ ಕಾರ್ಯಪ್ಪ, ಮುಂತಾದವರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.

Font Awesome Icons

Leave a Reply

Your email address will not be published. Required fields are marked *