ಮತ್ತೆ ʼಎಮರ್ಜೆನ್ಸಿʼ ಸಿನಿಮಾ ಬಿಡುಗಡೆ ಮುಂದೂಡಿಕೆ

ನಟಿ ಕಂಗನಾ ರನೌತ್ ಅವರ ಚೊಚ್ಚಲ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ದೇಶದಲ್ಲಿನ ತುರ್ತು ಪರಿಸ್ಥಿಯಿ ಸಂದರ್ಭವನ್ನು ಚಿತ್ರಿಸಲಾಗಿದೆ ಎಂದು ಹೇಳಲಾಗಿರುವ ಸಿನಿಮಾ ಬಿಡುಗಡೆ ಬಗ್ಗೆ ನಟಿ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಘೋಷಣೆ ಮಾಡಿದ್ದಾರೆ.

2023 ರ ಕೊನೆಯ ತ್ರೈಮಾಸಿಕದಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಕಾರಣ ಈ ಸಿನಿಮಾ ಬಿಡುಗಡೆಯನ್ನು 2024 ಕ್ಕೆ ಮುಂದೂಡಲಾಗಿದೆ ಎಂದು ನಟಿ ಕಂಗನಾ ರನೌತ್ ಮಾಹಿತಿ ನೀಡಿದ್ದಾರೆ. ಈ ಹಿಂದೆ ಚಲನಚಿತ್ರವನ್ನು ನವೆಂಬರ್ 24, 2023 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

Font Awesome Icons

Leave a Reply

Your email address will not be published. Required fields are marked *