ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಶ್ರುತಿ ಹಾಸನ್

Photo Credit :
News Kannada

ಮುಂಬೈ:  ‘ಸಲಾರ್​’ಸಿನಿಮಾದಲ್ಲಿ ನಟಿಸಿ ನಟಿ ಶ್ರುತಿ ಹಾಸನ್​ ಅವರು ಸೈ ಎನಿಸಿಕೊಂಡಿದ್ದಾರೆ.   ಡಿಸೆಂಬರ್​ 22ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಅವರು ನಟಿಸಿದ್ದಾರೆ. ಇದರ ನಡುವೆ ಅವರ ಮದುವೆ ಕುರಿತು ಗಾಸಿಪ್​ ಹರಿದಾಡಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಒಂದೇ ಒಂದು ಕಮೆಂಟ್​. ಆದರೆ ಅದಕ್ಕೆ ಸ್ವತಃ ಶ್ರುತಿ ಹಾಸನ್​ ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಡ್​ ಸೆಲೆಬ್ರಿಟಿಗಳ ಸ್ನೇಹಿತ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಪ್ರಶ್ನೋತ್ತರ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ‘ಶ್ರುತಿ ಹಾಸನ್​ ಗಂಡನ ಜೊತೆ ನನಗೆ ಸ್ನೇಹ ಇದೆ’ ಎಂದು ಒರಿ ಹೇಳಿದರು. ಹಾಗಾಗಿ ಶ್ರುತಿ ಹಾಸನ್​ ಅವರು ಬಾಯ್​ಫ್ರೆಂಡ್​ ಶಾಂತನು ಹಜಾರಿಕಾ ಜೊತೆ ಗುಟ್ಟಾಗಿ ಮದುವೆ ಆಗಿರಬಹುದು ಎಂದು ಎಲ್ಲರೂ ಊಹಿಸಿದ್ದಾರೆ. ಅದಕ್ಕೆ ಶ್ರುತಿ ಹಾಸನ್​ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಮದುವೆ ಆಗಿಲ್ಲ. ಎಲ್ಲದರ ಬಗ್ಗೆಯೂ ತಿಳಿಸುವ ನಾನು ಮದುವೆ ವಿಚಾರವನ್ನು ಯಾಕೆ ಮುಚ್ಚಿಡಲಿ? ನನ್ನ ಬಗ್ಗೆ ಏನೂ ಗೊತ್ತಿಲ್ಲದೇ ಇರುವವರು ದಯವಿಟ್ಟು ಸುಮ್ಮನಿರಿ’ ಎಂದು ಶ್ರುತಿ ಹಾಸನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಹನಿ ಹನಿ ಕೂಡಿ ಹಳ್ಳ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

This site is protected by reCAPTCHA and the Google
Privacy Policy and
Terms of Service apply.

44

News Kannada

The most exciting, trusted and preferred news websites of Karnataka and Kannadigas around the world.

Read More Articles

Font Awesome Icons

Leave a Reply

Your email address will not be published. Required fields are marked *