ಮಳೆ ಎಫೆಕ್ಟ್: 188 ವರ್ಷಗಳ ಇತಿಹಾಸವುಳ್ಳ ಗರಡಿ ಮನೆಯ ಗೋಡೆ ಕುಸಿತ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಡಿಸೆಂಬರ್,4,2024 (www.justkannada.in): ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಫೆಂಗಾಲ್ ಚಂಡಮಾರುತ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ರಾಜ್ಯದಲ್ಲಿ ಅವಾಂತರವೇ ಸೃಷ್ಠಿಯಾಗಿದೆ. ಈ ಮಧ್ಯೆ  ಮೈಸೂರಿನಲ್ಲಿ ಎಡಬಿಡದೆ ಮಳೆ ಸುರಿದ ಹಿನ್ನಲೆ ಗತಕಾಲದ ಗರಡಿ ಮನೆಯ ಗೋಡೆಯೊಂದು ಕುಸಿದಿದೆ.

ನಗರದ ಲಷ್ಕರ್ ಮೊಹಲ್ಲಾದಲ್ಲಿರುವ ಬರೋಬ್ಬರಿ 188 ವರ್ಷಗಳ ಇತಿಹಾಸವುಳ್ಳ ಗರಡಿ ಮನೆಯ ಗೋಡೆ ಭಾರಿ ಮಳೆಗೆ ಕುಸಿದು ಬಿದ್ದಿದೆ. ಇದು ಉಸ್ತಾದ್ ಶ್ರೀನಿವಾಸಣ್ಣನವರಿಗೆ ಸೇರಿದ ಗರಡಿ ಮನೆಯಾಗಿದೆ.  ಮೈಸೂರು ಮಹಾರಾಜರ ಸಹಾಯದಿಂದ 1836ರಲ್ಲಿ ಈ ಗರಡಿ ಮನೆ ನಿರ್ಮಾಣ ಮಾಡಲಾಗಿತ್ತು.

ಮಳೆಯಿಂದಾಗಿ ಗರಡಿ ಮನೆಯ ಗೋಡೆ ಶಿಥಿಲಗೊಂಡಿತ್ತು. ಎಡೆ ಬಿಡದೆ ಮಳೆ ಸುರಿದ ಪರಿಣಾಮ ಇದೀಗ ಗೋಡೆ ಕುಸಿದಿದೆ. ಈಗಲೂ ಸಹ ಯುವಕರು ಗರಡಿ ಮನೆಯಲ್ಲಿ ಪ್ರತಿದಿನ ಕಸರತ್ತು ನಡೆಸುತ್ತಿದ್ದಾರೆ.  ಪಾರಂಪರಿಕ ಕಟ್ಟಡ ಹಿನ್ನೆಲೆ‌ ಗರಡಿ ಸಂರಕ್ಷಣೆಗೆ ಸ್ಥಳೀಯರು‌ ಮನವಿ ಮಾಡಿದ್ದಾರೆ.

Key words: Rain effect, mysore, Garadi house, Wall, collapses

Font Awesome Icons

Leave a Reply

Your email address will not be published. Required fields are marked *