ಅಣಬೆಗಳು ಸಾಮಾನ್ಯವಾಗಿ ಎಲ್ಲರಿಗು ಇಷ್ಟವಾಗುತ್ತದೆ. ಇದರಿಂದ ಹಲವಾರು ರೀತಿಯ ಅಡಿಗೆಗಳನ್ನು ತಯಾರಿಸಬಹುದು ಇವತ್ತಿನ ರೆಸಿಪಿಯಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರೂ ಇಷ್ಟಪಡುವ ಮಶ್ರೂಮ್ ಸ್ಯಾಂಡ್ವಿಚ್ ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಅಣಬೆಗಳು – 250 ಗ್ರಾಂ
ಹೆಚ್ಚಿದ ಈರುಳ್ಳಿ- 1
ಹೆಚ್ಚಿದ ಬೆಳ್ಳುಳ್ಳಿ – 1
ಚಿಲ್ಲಿ ಫ್ಲೇಕ್ಸ್ – 1 ಚಮಚ
ಒರೆಗಾನೋ – 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಬ್ರೆಡ್ – 4
ತುರಿದ ಚೀಸ್ – ಕಾಲು ಕಪ್
ಮಾಡುವ ವಿಧಾನ: ಮೊದಲಿಗೆ ಒಂದು ಪ್ಯಾನ್ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಹೆಚ್ಚಿದ ಮಶ್ರೂಮ್ ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿ. ಈಗ ಇದಕ್ಕೆ ಉಪ್ಪು, ಚಿಲ್ಲಿ ಫ್ಲೇಕ್ಸ್ ಮತ್ತು ಒರೆಗಾನೋ ಹಾಕಿಕೊಂಡು ತಿರುವಿಕೊಳ್ಳಿ.
ಬಳಿಕ ಈ ಮಿಶ್ರಣಕ್ಕೆ ತುರಿದ ಚೀಸ್ ಅನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದು ಬ್ರೆಡ್ ಮೇಲೆ ಈ ಮಿಶ್ರಣವನ್ನು ಹದವಾಗಿ ಹಾಕಿಕೋಂಡು ಇನ್ನೊಂದು ಬ್ರೆಡ್ನ ಸಹಾಯದಿಂದ ಮುಚ್ಚಿ. ಸ್ಯಾಂಡ್ವಿಚ್ ಮೇಕರ್ ಅಥವಾ ಗ್ರಿಲ್ ಪ್ಯಾನ್ನಲ್ಲಿ ಇಟ್ಟು ಬಿಸಿಮಾಡಿಕೊಂಡರೆ ರುಚಿರುಚಿಯಾದ ಮಶ್ರೂಮ್ ಸ್ಯಾಂಡ್ವಿಚ್ ರೆಡಿ.