ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ಉತ್ತರ ಪ್ರದೇಶ: ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ ಉತ್ತರಪ್ರದೇಶದ ಆಗ್ರಾದ ನಾಗ್ಲಾ ಪೈಮಾ ಪ್ರದೇಶದಲ್ಲಿರುವ ಮಸೀದಿಯಲ್ಲಿ ನಡೆದಿದೆ. ಕೊಲೆ ಎಂದು ಖಚಿತ ಪಡಿಸಿದ್ದು ಹಂತಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಗೆ ಬಂದಾಗ ಯುವತಿಯ ಮೃತದೇಹ ಕಂಡು ಬೆಚ್ಚಿಬಿದ್ದಿದ್ದಾರೆ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಿ ತನಿಖೆಗೆ ಕೈಗೆತ್ತಿಕೊಂಡಿದ್ದಾರೆ.

ತನಿಕೆ ನಂತರ ಹಂತಕ ಮಹಿಳೆ ಮೇಲೆ ಅತ್ಯಚಾರವೆಸಗಿ ನಂತರ ಕಲ್ಲಿನಿಂದ ಮುಖವನ್ನು ಸಂಪೂರ್ಣವಾಗಿ ಜಜ್ಜಿ ಕೊಲೆ ಮಾಡಿದ್ದಾನೆ. ಇನ್ನು ಆ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೃತದೇಹದ ಗುರುತು ಪತ್ತೆಗೆ ಯತ್ನಿಸುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *