ಮಹಾಲಕ್ಷ್ಮೀ ಬ್ಯಾಂಕ್ ನ ಕೋಟ್ಯಾಂತರ ರೂ. ಅವ್ಯವಹಾರ ಎಸ್‌ಐಟಿ ತನಿಖೆಗೆ ಒಪ್ಪಿಸಿ; ಮಾಜಿ ಶಾಸಕ ರಘುಪತಿ ಭಟ್ 

ಉಡುಪಿ: ಮಹಾಲಕ್ಷ್ಮಿ ಬ್ಯಾಂಕ್ ನ ಮಲ್ಪೆ ಬ್ರಾಂಚ್ ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದ್ದು, ಅದನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.

ವಂಚನೆಗೊಳಗಾದ ನೂರಾರು ಸಂತ್ರಸ್ತರ ಜೊತೆ ಚರ್ಚೆ ನಡೆಸಿ, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಯಾಂಕ್ ನಲ್ಲಿ ಮೂರು ರೀತಿಯ ಅಕ್ರಮ ನಡೆದಿದೆ. ಮೊದಲನೆಯದಾಗಿ ಹಲವು ಮಂದಿಗೆ ಬ್ಯಾಂಕ್ ನವರೇ ಅವರ ಮನೆಗೆ ತೆರಳಿ 20ರಿಂದ 30 ಸಾವಿರ ಸಾಲ ನೀಡಿದ್ದಾರೆ. ಈಗ ಬ್ಯಾಂಕ್ ನಿಂದ ಎರಡು ಲಕ್ಷ ಕಟ್ಟಬೇಕು ಎಂಬ ನೋಟೀಸ್ ನೀಡಲಾಗಿದೆ.

ಇನ್ನೂ ಕೆಲವರಿಗೆ ಮೀನುಗಾರಿಕೆ ಸಾಲದ ಹೆಸರಿನಲ್ಲಿ ಸಹಿ ಪಡೆಯಲಾಗಿದ್ದು, ಅವರಿಗೆ ಯಾವುದೇ ಹಣ ನೀಡಿಲ್ಲ. ಇದೇ ರೀತಿ ಹಲವಾರು ರೀತಿಯಲ್ಲಿ ಬ್ಯಾಂಕ್ ನವರು ಕೋಟ್ಯಾಂತರ ರೂ. ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು. ಸಂತ್ರಸ್ತರು ಈಗ ತಮ್ಮನ್ನು ಸಂಪರ್ಕಿಸಿದ್ದು ನ್ಯಾಯಕ್ಕಾಗಿ ಒತ್ತಾಯ ಮಾಡಿದ್ದಾರೆ. ಅವರ ಧ್ವನಿಯಾಗಿ ನಾನು ಅವರ ಜೊತೆ ನಿಂತಿದ್ದೇನೆ.

ರಾಜ್ಯ ಸರಕಾರ ಮಹಾಲಕ್ಷ್ಮೀ ಬ್ಯಾಂಕ್ ವಿರುದ್ಧ ಎಸ್‌ಐಟಿ ತನಿಖೆ ನಡೆಸುವ ಮೂಲಕ ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕು. ಬ್ಯಾಂಕ್ ನವರು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ್ದು, ಅದಕ್ಕೆ ನಾನು ಸಿದ್ಧ ಎಂದು ರಘುಪತಿ ಭಟ್ ಹೇಳಿದ್ದಾರೆ. ರಘುಪತಿ ಭಟ್ ಜೊತೆಗೆ ಬ್ಯಾಂಕ್ ನಿಂದ ನೊಂದ ಸುಮಾರು ನೂರು ಮಂದಿ ಜನರು ಉಪಸ್ಥಿತರಿದ್ದು, ತಮ್ಮ ಸಮಸ್ಯೆಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.

Font Awesome Icons

Leave a Reply

Your email address will not be published. Required fields are marked *