ಮಹಾಶಿವರಾತ್ರಿ ಆಚರಿಸಲು ಪಾಕ್‌ ತಲುಪಿದ 62 ಮಂದಿ ಹಿಂದೂ ಯಾತ್ರಿಕರು

ಲಾಹೋರ್: ಮಹಾಶಿವರಾತ್ರಿ ಆಚರಣೆಗಾಗಿ 62 ಮಂದಿ ಹಿಂದೂಗಳು ವಾಘಾ ಗಡಿ ಮೂಲಕ ಬುಧವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ. ‘ಮಹಾಶಿವರಾತ್ರಿ ಆಚರಣೆಗಾಗಿ ಒಟ್ಟು 62 ಮಂದಿ ಹಿಂದೂ ಯಾತ್ರಿಕರು ಭಾರತದಿಂದ ಲಾಹೋರ್‌ಗೆ ಆಗಮಿಸಿದ್ದಾರೆ’ ಎಂದು ಇವಕ್ಯೂ ದತ್ತಿ ಮಂಡಳಿಯ ವಕ್ತಾರ ಅಮೀರ್ ಹಶ್ಮಿ ತಿಳಿಸಿದ್ದಾರೆ.

‘ಲಾಹೋರ್‌ನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಚಕ್ವಾಲ್‌ನ ಐತಿಹಾಸಿಕ ಕತಾಸ್ ರಾಜ್ ದೇಗುಲದಲ್ಲಿ ಮಾರ್ಚ್ 9 ರಂದು ಮಹಾಶಿವರಾತ್ರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಮುಖಂಡರೂ ಸಹ ಭಾಗವಹಿಸಲಿದ್ದಾರೆ’ ಎಂದು ಹಶ್ಮಿ ಹೇಳಿದ್ದಾರೆ.

‘ವಿಶ್ವನಾಥ್ ಬಜಾಜ್ ನೇತೃತ್ವದ ಹಿಂದೂ ಯಾತ್ರಿಕರು ಲಾಹೋರ್‌ನ ಗುರುದ್ವಾರ ಡೇರಾ ಸಾಹಿಬ್‌ನಲ್ಲಿ ಕಳೆದ ದಿನ ತಂಗಿದ್ದು, ಇಂದು ಕತಾಸ್ ರಾಜ್ ದೇವಾಲಯಕ್ಕೆ ಪ್ರಯಾಣ ಬೆಳೆಸಲಿದ್ದಾರೆ’ ಎಂದು ಹೇಳಿದ್ದಾರೆ.

ಮಾರ್ಚ್ 10ರಂದು ಲಾಹೋರ್‌ಗೆ ವಾಪಸ್ ಆಗಲಿರುವ ಯಾತ್ರಿಕರು, ಮಾರ್ಚ್ 11ರಂದು ಇಲ್ಲಿನ ಕೃಷ್ಣ ದೇಗುಲ, ಲಾಹೋರ್ ಕೋಟೆ ಮತ್ತು ಇತರೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಮಾರ್ಚ್ 12ರಂದು ಸ್ವದೇಶಕ್ಕೆ ವಾಪಸ್ ಆಗುತ್ತಾರೆ.

Font Awesome Icons

Leave a Reply

Your email address will not be published. Required fields are marked *