ಮೈಸೂರು,ಸೆಪ್ಟಂಬರ್,23,2024 (www.justkannada.in): ಮಹಿಷಾ ದಸರಾ ನಡೆಯಲು ಬಿಡಲ್ಲ. ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಮುಂದಾದರೇ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತಾ ಚಾಮುಂಡಿ ಭಕ್ತರ ಕೈ ಮೇಲಾಗುತ್ತಾ ನೋಡೇ ಬಿಡೋಣಾ ಎಂದು ಮಹಿಷಾ ದಸರಾ ಆಚರಣಾ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.
ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಮಹಿಷನಾ ಮೇಲೆ ನಂಬಿಕೆ ಇದ್ದರೆ ಮನೆಯಲ್ಲೆ ಪೂಜೆ ಮಾಡಿಕೊಳ್ಳಲಿ.ಹಿಂದೂ ಸಮಾಜವಾಗಿ ನಾವೆಲ್ಲಾ ಒಟ್ಟಾಗಿ ಇರೋಣಾ. ಮಹಿಷಾ ದಸರಾ ಹೆಸರಿನಲ್ಲಿ ಒಡಕು ಮೂಡಿಸಿಕೊಳ್ಳುವುದು ಬೇಡ. ಮುಸ್ಲಿಂರು ಮಹಿಷನನ್ನು ನಂಬಲ್ಲ ಮುಂದೊಂದು ದಿನ ಮಹಿಷನ ಮೆರವಣಿಗೆ ಮೇಲೂ ಮುಸ್ಲಿಮರು ಕಲ್ಲು ಎಸೆಯುತ್ತಾರೆ. ಮಹಿಷಾ ದಸರಾ ಮಾಡಲು ಚಾಮುಂಡಿ ಬೆಟ್ಟ ಸರಿಯಾದ ಜಾಗವಲ್ಲ. ಮನೆಗಳಲ್ಲಿ ಬೇಕಾದರೆ ಮಹಿಷಾ ಫೋಟೋ ಇಟ್ಟು ಕೊಳ್ಳಿ ಅವನ ಥರದ ಮಗುವೆ ಹುಟ್ಟಲಿ ಎಂದು ಬೇಕಾದ್ರೆ ಪೂಜೆ ಮಾಡಿ. ದಸರಾ ಬಂದಾಗ ಅಪಸ್ವರ ಬೇಡ. ಕರ್ಕಶ ಧ್ವನಿ ಬಿಡಿ ಎಂದರು.
ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಮಾಡುತ್ತೇವೆ ಅಂದರೆ ಚಾಮುಂಡಿ ಭಕ್ತರು ಕೂಡ ಅಂದೇ ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತಾ ಚಾಮುಂಡಿ ಭಕ್ತರ ಕೈ ಮೇಲಾಗುತ್ತಾ ನೋಡೇ ಬಿಡೋಣಾ ಎಂದು ಸವಾಲು ಹಾಕಿದರು.
ಕಳೆದ ವರ್ಷ ಆಚರಣೆ ಮಾಡುತ್ತೇವೆ ಅಂದರು ನಾವು ಬಿಟ್ವಾ ತಡೆದವು. ಹಾಗೆಯೇ ಈ ಬಾರಿಯೂ ಬೆಟ್ಟದಲ್ಲಿ ಆಚರಣೆ ಮಾಡಲಿಕ್ಕೆ ನಾವು ಬಿಡಲ್ಲ.ಮಹಿಷಾಸುರ, ಕಂಸ, ರಾವಣ ಯಾರನ್ನಾದರೂ ಮನೆಯಲ್ಲಿ ಆರಾಧನೆ ಆದರೆ ಚಾಮುಂಡಿ ಬೆಟ್ಟದಲ್ಲಿ ಅಲ್ಲ. ಇದಕ್ಕೆ ಚಾಮುಂಡಿ ಭಕ್ತರು ಅವಕಾಶ ಮಾಡಿಕೊಡಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
Key words: Mahisha Dasara, Chamundi Chalo, Prathap Simha