ಇಸ್ಲಾಮಾಬಾದ್ : ಸಾರ್ವತ್ರಿಕ ಚುನಾವಣೆಯ ಭರಾಟೆಯಲ್ಲಿ ಇರುವ ಪಾಕಿಸ್ತಾನದಲ್ಲಿ ಚುನಾವಣಾ ಪ್ರಚಾರ ಕಣ ಹಲವು ಅಚ್ಚರಿ, ವಿವಾದ ಹಾಗೂ ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಉಗ್ರರ ದಾಳಿ ಭೀತಿ ನಡುವಲ್ಲೇ ದೇಶಾದ್ಯಂತ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಮಾವೇಶಗಳನ್ನು ನಡೆಸುತ್ತಿವೆ. ಈ ಪೈಕಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರ ಪಿಎಂಎಲ್ – ಎನ್ ಪಕ್ಷದ ಪ್ರಚಾರ ಸಭೆಯು ವಿಶೇಷ ಕಾರಣಕ್ಕಾಗಿ ಗಮನ ಸೆಳೆದಿದೆ.
ನವಾಜ್ ಷರೀಫ್ ಅವರ ಸಾರಥ್ಯದ ಪಿಎಂಎಲ್ – ಎನ್ ಪಕ್ಷದ ಚಿಹ್ನೆಯಲ್ಲಿ ವನ್ಯ ಜೀವಿಗಳಿವೆ. ಇದೇ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರು ನಿಜವಾದ ಹುಲಿ ಹಾಗೂ ಸಿಂಹವನ್ನು ಕಬ್ಬಿಣದ ಬೋನ್‌ಗಳಲ್ಲಿ ಇರಿಸಿಕೊಂಡು ವಾಹನಗಳಲ್ಲಿ ಸಾಗಿಸಿಕೊಂಡು ಬಂದಿದ್ದಾರೆ. ಲಾಹೋರ್ ನಗರದ ಗಲ್ಲಿ ಗಲ್ಲಿಗಳಲ್ಲೂ ಈ ಬೋನ್ ಸಹಿತ ಹುಲಿ, ಸಿಂಹಗಳು ಸುತ್ತಾಟ ನಡೆಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿದೆ.
ಸಾವಿರಾರು ಜನರು ಸೇರಿರುವ ಪ್ರಚಾರ ಸಭೆ, ಸಮಾವೇಶಗಳಿಗೆ ಪಂಜರದಲ್ಲಿ ಕೂಡಿ ಹಾಕಿದ್ದ ಹುಲಿ ಹಾಗೂ ಸಿಂಹವನ್ನು ಕರೆ ತರಲಾಗಿದೆ. ಜನರು ಹುಲಿ ಹಾಗೂ ಸಿಂಹಗಳ ಎದುರು ನಿಂತು ಸೆಲ್ಫಿ ಹಾಗೂ ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇತ್ತ ಈ ಬೆಳವಣಿಗೆಯ ಮಾಹಿತಿ ಸಿಕ್ಕ ಕೂಡಲೇ ನವಾಜ್ ಷರೀಫ್ ಸಿಟ್ಟಿಗೆದ್ದಿದ್ದಾರೆ. ನಿಜವಾದ ಸಿಂಹ ಹಾಗೂ ಹುಲಿಗಳನ್ನು ಯಾವುದೇ ಕಾರಣಕ್ಕೂ ಪಿಎಂಎಲ್ – ಎನ್ ಪಕ್ಷದ ಸಮಾವೇಶಗಳಿಗೆ ಕರೆ ತರಬಾರದು, ಕೂಡಲೇ ಹಿಂದುರುಗಿಸಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ನವಾಜ್ ಷರೀಫ್ ಸೂಚನೆ ನೀಡಿರೋದಾಗಿ ಪಿಎಂಎಲ್ – ಎನ್ ಪಕ್ಷದ ನಾಯಕಿ ಮರಿಯಮ್ ಔರಂಗಾಜೇಬ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಆರೆ.
#Pakistan ‘Real lion’ brought for Former PM Nawaz Sharif’s election rally in Lahore. On Tuesday evening, Nawaz Sharif and Maryam Nawaz will lead a public rally in NA-130 constituency, from where PML-N supremo #NS will contest general elections slated for February 8. The tiger was… pic.twitter.com/NYd876rARD
— Ghulam Abbas Shah (@ghulamabbasshah) January 23, 2024