ಮಾ.3 ರಂದು ಮೈಸೂರು ವಿವಿಯಿಂದ ಎಸ್.ಎಂ ಕೃಷ್ಣ, ಟಿ.ಎನ್. ಸೀತಾರಾಮ್ ರಿಗೆ ಗೌರವ ಡಾಕ್ಟರೇಟ್ ಪ್ರದಾನ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್




ಮೈಸೂರು,ಫೆಬ್ರವರಿ,29,2024(www.justkannada.in):  ಮಾರ್ಚ್ 3ರಂದು ಮೈಸೂರು ವಿಶ್ವ ವಿದ್ಯಾನಿಲಯ 104ನೇ ಘಟಿಕೋತ್ಸವ ಹಿನ್ನೆಲೆ, ಅಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮ್  ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.

ಈ ಕುರಿತು ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರಿಂದ ಮಾಹಿತಿ ನೀಡಿದ್ದಾರೆ. ಸಿಂಡಿಕೇಟ್ ಸಭೆಯಲ್ಲಿ  ಕೈಗೊಂಡಿದ್ದ ತೀರ್ಮಾನವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ರಾಜ್ಯಪಾಲರ ಅಂಕಿತ ದೊರೆಯುವುದು ಮಾತ್ರ ಬಾಕಿ ಇದೆ.

103ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಎಸ್.ಎಂ. ಕೃಷ್ಣ ರನ್ನ ಆಯ್ಕೆ ಮಾಡಲಾಗಿತ್ತು. ಆದರೆ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆ ಗೌರವ ಡಾಕ್ಟರೇಟ್ ನೀಡುವ  ನಿರ್ಧಾರವನ್ನು ತಡೆ ಹಿಡಿಯಲಾಯಿತು. ಆದ್ದರಿಂದ ಈ ಬಾರಿಯ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು  ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರು ತಿಳಿಸಿದ್ದಾರೆ.

Key words: SM Krishna – T.N. Sitaram – Mysore University-March 3-  honorary doctorate.






Previous articleರಾಜ್ಯ ಸರ್ಕಾರಕ್ಕೆ ‘ಜಾತಿಗಣತಿ ವರದಿ’ ಸಲ್ಲಿಕೆ: ಸಿಎಂ ಸಿದ್ದರಾಮಯ್ಯರಿಂದ ಸ್ವೀಕಾರ.


Font Awesome Icons

Leave a Reply

Your email address will not be published. Required fields are marked *