ಬೆಂಗಳೂರು: ಕಳೆದ ವಾರ ಸಂಭವಿಸಿದ ಸ್ಫೋಟದ ನಂತರ ರಾಮೇಶ್ವರಂ ಕೆಫೆಯ ರಿಪೇರಿ ಕೆಲಸ ನಡೆಯುತ್ತಿದ್ದು, ಶನಿವಾರದಂದು ಮತ್ತೆ ತೆರೆದುಕೊಳ್ಳಲು ಸಜ್ಜಾಗಿದೆ.
ತನಿಖಾನಂತರ NIA ಕೆಫೆಯನ್ನು ಹಸ್ತಾಂತರಿಸಿದ ಕೂಡಲೆ ಅದರ ರಿಪೇರಿ ಕೆಲಸಗಳು ಶುರುವಾಗಿರುವ ಬಗ್ಗೆ ಮಾಹಿತಿ ನೀಡಿದ ಶ್ರೀಧರ್ ಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ವಹಣಾ ತಂಡ ಹಲವಾರು ಸುತ್ತಿನ ಮೀಟಿಂಗ್ ಹಮ್ಮಿಕೊಳ್ಳಲಾಗಿತ್ತು ಎಂದರು.
ಕೆಫೆ ಮೊದಲಿಗಿಂತಲೂ ಪ್ರಖರ ಹಾಗು ಶಕ್ತಿಶಾಲಿಯಾಗಿ ತೆರೆದುಕೊಳ್ಳಲಿದೆ ಎಂಬ ಉತ್ಸಾಹದ ನುಡಿಗಳನ್ನಾಡಿದ ಅವರು, ಅದೃಷ್ಟವಶಾತ್ ಹೆಚ್ಚೇನೂ ಹಾನಿಯಾದೆ, ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದರು.
ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಲು ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಎಲ್ಲಾ ಸಿಬ್ಬಂದಿಗೂ ಅದನ್ನು ಬಳಸುವ ತರಬೇತಿ ನೀಡಲಾಗಿದೆ.