ಮೈಸೂರು: ಪ್ರೀತಿಸಿದವನು ನನ್ನನ್ನು ನೋಡಿದ ಮೇಲೆ ನಿರಾಕರಿಸಿದ ಎಂಬ ಕಾರಣಕ್ಕೆ ಯುವತಿ ಬಿಲ್ಡಿಂಗ್ ತುದಿಯಿಂದ ಬಿದ್ದು ಸಯುವುದಾಗಿ ಯುವಕನಿಗೆ ಬೆದರಿಕೆ ಹಾಕಿದ್ದಾಳೆ.ಈ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಇನ್ಸ್ಟಾಗ್ರಾಮ್ ಮೂಲಕ ಇಬ್ಬರ ಪ್ರೀತಿ ಶುರುವಾಗಿ ಒಂದು ವರ್ಷವಾಗಿತ್ತು. ಪ್ರಿಯಕರ ನಸಿಬೂರ್ ರೆಹಮಾನ್ ಬಿಹಾರ ಮೂಲದವನಾಗಿದ್ದು ಆತ ಏಷಿಯನ್ ಪೈಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಯುವತಿ ನಾಸಿಂ ಬೇಗಂ (31) .
ಬಿಹಾರದಿಂದ ನಂಜನಗೂಡಿಗೆ ಬಂದು ಆಕೆಯನ್ನು ಭೇಟಿ ಆದ ನಂತರ ನನಗೆ ನೀನು ಬೇಡ ಎಂದು ಆತ ನಿರಾಕರಿಸಿದ್ದಾನೆ ಈ ವೇಳೆ ಸಿಟ್ಟಿಗೆದ್ದ ಮಹಿಳೆ ಎತ್ತರವಾದ ಬಿಲ್ಡಿಂಗ್ ತುದಿಯಲ್ಲಿ ನಿಂತು ಬಿದ್ದು ಮದುವೆ ಆಗದಿದ್ದರೆ ಸಾಯುವುದಾಗಿ ಆತನಿಗೆ ಬೆದರಿಕೆ ಹಾಕಿದ್ದಾಳೆ. ರೆಹಮಾನ್ನ್ನು ವಿಚಾರಿಸಿದಾಗ ವಯಸ್ಸಿನ ಅಂತರಕ್ಕೆ ನಿರಾಕರಿಸಿರುವುದಾಗಿ ಕಾರಣ ತಿಳಿಸಿದ್ದಾನೆ. ಸದ್ಯ ಪೊಲೀಸರು ಮಹಿಳೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.