ಬೆಂಗಳೂರು,ಆಗಸ್ಟ್,3,2024 (www.justkannada.in): ಮುಡಾ ಹಗರಣ ಖಂಡಿಸಿ ಇಂದಿನಿಂದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಮುಡಾ ಸೈಟ್ ದಾಖಲೆ ಮುಂದಿಟ್ಟು ಅಮೇಲೆ ಪಾದಯಾತ್ರೆ ಮಾಡಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಪಕ್ಷ ಭಾಗಶಃ ಜನತಾ ಪಕ್ಷವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ ಸೇರಿ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ ವಿಜಯೇಂದ್ರ ನಾಯಕತ್ವ ಒಪ್ಪುತ್ತಿಲ್ಲ ಎಂದು ಎದ್ದು ಕಾಣುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಎಂದರು.
ಜೆಡಿಎಸ್ ನವರ ಕೈಕಾಲಿಗೆ ಬಿದ್ದು ಪಾದಯಾತ್ರೆ ಮಾಡುತ್ತಿದ್ದಾರೆ. ಮುಡಾದ ಸೈಟ್ ದಾಖಲೆ ಮುಂದಿಟ್ಟು ಪಾದಯಾತ್ರೆ ಮಾಡಲಿ. ರಾಜ್ಯಪಾಲರನ್ನ ಇಟ್ಟುಕೊಂಡು ರಾಜಕೀಯ ಮಾಡಬೇಡಿ. ರಾಜಭವನವನ್ನ ಪ್ರಾದೇಶಿಕ ಕಚೇರಿಯಾಗಿ ಬಳಸಬಾರದು ಪ್ರತಿಭಟನೆ ಜನ್ಮ ಸಿದ್ದ ಹಕ್ಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
Key words: Muda scam, BJP, JDS, Minister, Priyank Kharge