ಬೆಂಗಳೂರು,ಆಗಸ್ಟ್,2,2024 (www.justkannada.in): ಮುಡಾ ಹಗರಣ ಸಂಬಂಧ ರಾಜ್ಯಪಾಲರಿಗೆ ದೂರು ಕೊಟ್ಟ ಹಿನ್ನೆಲೆ ತಮ್ಮ ವಿರುದ್ದ ಕಿಡಿಕಾರಿದ್ದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರಿಗೆ ಹಲವು ಪ್ರಶ್ನೆಗಳನ್ನಾಕುವ ಮೂಲಕ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ತಿರುಗೇಟು ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಟಿ.ಜೆ ಅಬ್ರಾಹಂ, ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿ ಮಾಡಿದಾಗ ಕೆಸರೆಯಲ್ಲಿ ಕೃಷಿ ಜಮೀನೇ ಇರಲಿಲ್ಲ. 2004ರಲ್ಲಿ ಕೆಸರೆ ಗ್ರಾಮದ 3.16 ಎಕರೆ ಭೂಮಿ ಮಂಜುನಾಥ್ ಸ್ವಾಮಿ ಹೆಸರಿಗೆ ನೋಂದಣಿಯಾಗುತ್ತದೆ. ಆ ಜಾಗ 2001ರಲ್ಲಿಯೇ ದೇವರಾಜ ಬಡಾವಣೆ ಆಗಿತ್ತು. ಆ ಹೆಸರಿನಲ್ಲಿ ಸೈಟು ಮಾಡಿ ಜನರಿಗೆ ನೀಡಿದ್ದರು. ಯಾರಿಗೋ ಹಂಚಿಕೆಯಾಗಿದ್ದ ಸೈಟನ್ನು ನನ್ನ ಕೃಷಿ ಜಮೀನು ಅಂತ ಮಾಡಬಹುದಾ? ವಿಧಾನಸೌಧ ಇದ್ದ ಜಾಗ ಹಿಂದೆ ನನ್ನ ಕೃಷಿ ಜಮೀನು ಆಗಿತ್ತು ಅಂತ ನಾನು ದಾಖಲೆ ಕೊಟ್ಟರೆ ಸಿಎಂ ಒಪ್ಪಿಕೊಳ್ಳುತ್ತಾರೆಯೇ? ಕೃಷಿ ಭೂಮಿ ಇಲ್ಲದೇ ಇರುವ ಜಾಗ ಕೃಷಿ ಜಮೀನು ಎಂದು ಮಾರಾಟ ಮಾಡಬಹುದಾ? ಸೈಟುಗಳನ್ನು ಪಡೆದವರ ಹೆಸರಿನಲ್ಲಿ ಇವರು ಕಂದಾಯ ಕಟ್ಟುತ್ತಾ ಇದ್ದರೇ? ರಸ್ತೆ ಮಾಡಿ ಸೈಟು ಮಾಡಿ ಹಂಚಿರುವ ಜಾಗಕ್ಕೆ ಇವರು ಕನ್ವರ್ಷನ್ ಮಾಡಿಸಿಕೊಡುತ್ತಾರಾ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಡಿ.ಕೆ ಶಿವಕುಮಾರ್ ಹೇಳ್ತಾರೆ ಇದರಲ್ಲಿ ಹುರುಳಿಲ್ಲ ಅಂತಾರೆ. ಅವರಷ್ಟು ನಾನು ಓದಿಲ್ಲ. ಒಂದುವರೆ ಗಂಟೆ ಕಾಲ ನಾನು ರಾಜ್ಯಪಾಲರಿಗೆ ಸಂಪೂರ್ಣವಾಗಿ ಹೇಳಿದ್ದೇನೆ . 2004ರಲ್ಲಿ ಕೆಸರೇ ಗ್ರಾಮದಲ್ಲಿ ಜಮೀನು ಸೇಲ್ ಆಗುತ್ತದೆ. ದೇವನೂರು ಬಡಾವಣೆ ಕೃಷಿ ಭೂಮಿ ಹೇಗೆ ಆಗಲಿದೆ. ರೈತರಿಗೆ ಸೇಲ್ ಆಗಿರುವ ಜಮೀನು ಮಾರೋಕೆ ಆಗುತ್ತಾ..? ಕೃಷಿ ಭೂಮಿ ಸೇಲ್ ಆಗುತ್ತಾ..? ಇದನ್ನು ಡಿ.ಕೆ ಶಿವಕುಮಾರ್ ಒಪ್ಪಿಕೊಳ್ತಾರಾ..? ಕೃಷ್ಣಬೈರೇಗೌಡ್ರು ಒಪ್ಪಿಕೊಳ್ತಾರಾ..? ಇದರಲ್ಲಿ ಯಾರಿಗೂ ತಪ್ಪು ಕಾಣಲ್ವಾ..? 2004ರಲ್ಲಿ ನೀವು ಕೊಂಡುಕೊಂಡಾಗ ಕೃಷಿ ಭೂಮಿ ಎಲ್ಲಿ ಇತ್ತು..? ದೇವನೂರು ಬಡಾವಣೆ ವೀಕ್ಷಣೆಗೆ ತಹಶಿಲ್ದಾರರು, ಡಿಸಿಗಳು ಹೋಗಿದ್ರಂತೆ. ಕೃಷಿ ಭೂಮಿ ಎಲ್ಲಿದೆ..? ನಿಮಗೆ ಎಲ್ಲಿ ಕೃಷಿ ಭೂಮಿ ಕಾಣಿಸ್ತು..? ಡಿಸಿ ಖುದ್ದಾಗಿ ಸ್ಪಾಟ್ ವಿಸಿಟ್ ಮಾಡಿದ್ರಂತಲ್ಲ ಆಗ ಸೈಟು ಕಾಣಿಸ್ಲಿಲ್ವಾ..? ಅದೇ ಸಮಯದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ರು, ಆಗ ಪ್ರಭಾವ ಬಳಸಲಿಲ್ವಾ..? ಇದೇ ಜಮೀನು ಡಿನೋಟಿಫೈ ಆದಾಗಲೂ ಡಿಸಿಎಂ ಆಗಿರಲಿಲ್ವಾ ಸಿದ್ದರಾಮಯ್ಯ..? ಪ್ರೆವಿನ್ಶನ್ ಆಫ್ ಕರಪ್ಶನ್ ಆ್ಯಕ್ಟ್ ಅಡಿ ನೇರವಾಗಿ ಅವರದೇ ಸಹಿ ಇರಬೇಕು ಅಂತಿಲ್ಲ. 2010 ರಲ್ಲಿ ಗಿಫ್ಟ್ ಡೀಡ್ ಆದಾಗ ಕೃಷಿ ಭೂಮಿ ಅಂತ ನಮೂದು ಮಾಡ್ತಾರೆ. 2001 ರಲ್ಲಿ ಬಡಾವಣೆ ಆದ ಜಾಗಕ್ಕೆ 2010 ರಲ್ಲಿ ಕೃಷಿ ಭೂಮಿ ಅಂತ ನಮೂದು ಮಾಡ್ತಾರೆ. ಪಾರ್ವತಿ ಸಿದ್ದರಾಮಯ್ಯ ಅಣ್ಣ ಕೊಂಡುಕೊಂಡೆ ಎಂಬ ಜಮೀನು ಅಲ್ಲಿ ಇಲ್ಲವೇ ಇಲ್ಲ. ಇಲ್ಲದೇ ಇರುವ ಭೂಮಿಗೆ ಸೈಟು ಹಂಚಿಕೆ ಮಾಡಿಕೊಂಡಿದ್ದಾರೆ. ಇಲ್ಲದೇ ಇರುವ ಭೂಮಿಗೆ ಪರಿಹಾರ ಕೇಳಿದ್ದಾರೆ. ಸಿದ್ದರಾಮಯ್ಯ ನನ್ನ ಜಮೀನು ಬಿಟ್ಟುಕೊಡ್ಲಾ ಅಂತ ಕೇಳಿದ್ರು ಇಲ್ಲದೇ ಇರುವ ಜಮೀನಿಗೆ ಪರಿಹಾರಾನಾ..? ಸಾಮಾನ್ಯ ಜನರಿಗೆ ಇದು ಸಾಧ್ಯಾನಾ..? ಎಂದು ಟಿಜೆ ಅಬ್ರಾಹಂ ಕುಟುಕಿದರು.
ರಾಜ್ಯಪಾಲರು ಜೊತೆಗೆ ಒಂದುವರೆ ಗಂಟೆ ಚರ್ಚೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಟಿ.ಜೆ ಅಬ್ರಾಹಂ ರಾಜ್ಯಪಾಲರು ನೋಟೀಸ್ ಕೊಟ್ಟಿದ್ದು ಕಾನೂನು ಬದ್ಧವಾಗಿದೆ. ಈ ಕೇಸ್ ನಲ್ಲಿ ಸಂಪೂರ್ಣ ಅಥಾರಿಟಿ ರಾಜ್ಯಪಾಲರಿಗೆ ಬರಲಿದೆ. ರಾಜ್ಯಪಾಲರಿಗೆ ಇದರಲ್ಲಿ ಯಾಕೆ ಸ್ಪೆಷಲ್ ಇಂಟ್ರಸ್ಟ್ ಅಂತ ಗೊತ್ತಿಲ್ಲ. ನಾನು ಬೇಡಿಕೆ ಇಟ್ಟಾಗ, ಸ್ವಲ್ಪ ಸಮಯ ತೆಗೊಂಡು ನಮ್ಮನ್ನು ಕರೆದು ಕೇಳಿದರು. ಸಿಎಂ ಮೇಲೆ ಆರೋಪ ಇದ್ದಾಗ ರಾಜ್ಯಪಾಲರು ಗಂಭೀರವಾಗಿ ಕೇಳಿದರು. ಒಂದುವರೆ ಗಂಟೆ ಕಾಲ ನನ್ನ ಕರೆದು ಕೇಳಿದ್ರು. ಸಿಎಂ ನನ್ನ ಜಮೀನು, ನನಗೆ ಕೊಡಿ ಅಂತ ಕೇಳಿಲ್ಲ ಅಂದ್ರೆ ತಪ್ಪು ಆಗ್ತಿರಲಿಲ್ಲ
ಟಿ.ಜೆ ಅಬ್ರಾಹಂ ಯಾವುದೇ ಕಾರಣಕ್ಕೂ ಯಾರ ಪ್ರಭಾವಕ್ಕೂ ಒಳಗಾಗಲ್ಲ. ರಾಜ್ಯ ಸರ್ಕಾರ ಬೇರೆ ತನಿಖೆ ಆಯೋಗ ರಚನೆ ಮಾಡಲಿ.ಇದರಲ್ಲಿ ನೋ ಪಾಲಿಟಿಕಲ್. ಬಿಜೆಪಿ ಜೆಡಿಎಸ್ ಯಾವುದೇ ನಾಯಕರುಗಳು ನನ್ನ ಭೇಟಿಯಾಗಿಲ್ಲ. ಯಾವ ನಾಯಕರ ಜೊತೆಗೆ ಮಾತಾಡಿಲ್ಲ. ಸ್ವತಃ ಕಾಂಗ್ರೆಸ್ ನಾಯಕರು ಸಹ ನನ್ನ ಜೊತೆಗೂ ನಾನು ಮಾತಾಡಿಲ್ಲ. ಆರೋಪ ಸತ್ಯವಾಗಿದ್ರೆ, ಅದು ನಿಜವಾಗಿದ್ರೆ ದೊಡ್ಡ ಮನುಷ್ಯ ಆಗ್ತಿದ್ದೆ. ಸಿ.ಎಸ್ ಭೇಟಿಗೆ ಬಂದಿದ್ದೆ, ಆದರೆ ಸಿಎಸ್ ಇರಲಿಲ್ಲ. ಮಡಿಕೇರಿಗೆ ಹೋಗಿದ್ದಾರೆ ಎಂದರು.
ಎರಡು ಮೂರು ಅಂಶ ಕ್ಲ್ಯಾರಿಫೈ ಮಾಡಬೇಕಿದೆ. ಕ್ಯಾಬಿನೆಟ್ ನಿರ್ಣಯ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ನನ್ನ ಮೇಲೆ ಆರೋಪ ಇದೆ ಅಂತ ಹೇಳಿದ್ದಾರೆ. ಆರೋಪ ಇರುವುದು ಸತ್ಯ, ಆರೋಪ ಅಂದ್ರೆ ಅದು ಅಪರಾಧ ಅಲ್ಲ. ಪ್ರತಿಯೊಂದನ್ನು ನಾನು ಫೇಸ್ ಮಾಡಿದ್ದೇನೆ. ಅಲಂಕಾರಕ್ಕೆ ಇರಲಿ ಅಂತ ನನ್ನ ಬಗ್ಗೆ ಹೇಳಿದ್ದಾರೆ. ಕಾನೂನಲ್ಲಿ ಅವಕಾಶ ಇಲ್ಲ, ಇದೊಂದು ರಾಜಕೀಯ ಪ್ರೇರಿತ ಅಂತ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ದೂರಿನ ಜೊತೆಗೆ ನಾನು ಕೋರ್ಟ್ ಸರ್ಕ್ಯುಲರ್ ನೀಡಿದ್ದೇನೆ. ಸರ್ಕ್ಯುಲರ್ ಏನಿದೆ ಅಂತ ನೀವೆಲ್ಲ ಸಚಿವರು ನೋಡಲೇ ಇಲ್ವಾ..? ಎಂದು ಕಿಡಿಕಾರಿದರು.
ನಾನು ರಾಜ್ಯಪಾಲರನ್ನು ಅಪ್ರೋಚ್ ಮಾಡಿದ್ದು ತಪ್ಪಲ್ಲ. ರಾಜ್ಯದ ಕಾನೂನು ಪ್ರಕಾರವೇ ನಾನು ರಾಜ್ಯಪಾಲರ ಭೇಟಿ ಮಾಡಿದ್ದೇನೆ. ಕಾನೂನು ಮಂತ್ರಿಗಳೂ ಕೂಡ ಓದಲಿಲ್ವಾ..? ನಾನೇನು ಕಣ್ಮುಚ್ಚಿಕೊಂಡು ಹೋದ್ನಾ..? ಡಿಕೆ ಶಿವಕುಮಾರ್ ರಷ್ಟು ನಾನು ಓದಿಲ್ಲ. ನಾನು ರಾಜ್ಯಪಾಲರ ಮುಂದೆ ಒಂದುವರೆ ಗಂಟೆ ಪ್ರೆಸೆಂಟೇಷನ್ ಮಾಡಿದ್ದೇನೆ. ರಾಜ್ಯಪಾಲರು ಏನೇನು ಸ್ಪಷ್ಟನೆ ಕೇಳಬೇಕಿತ್ತೋ ಕೇಳಿದ್ದಕ್ಕೆ ಕೊಟ್ಟಿದ್ದೇನೆ ಎಂದರು.
Key words: Muda scam, CM Siddaramaiah, TJ Abraham