ಬೆಂಗಳೂರು: ಮೂರು ಡಿಸಿಎಂ ಹುದ್ದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್. ಆ ರೀತಿ ಏನಿಲ್ಲ. ಎಐಸಿಸಿ ಅಧ್ಯಕ್ಷರೇ ಸ್ಪಷ್ಟನೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಂತದ್ಯಾವುದೂ ಮಾಡೋದಕ್ಕೆ ಆಗೋಲ್ಲ ಎಂದಿದ್ದಾರೆ ಎಂದು ಹೇಳಿದರು.
ಈ ವೇಳೆ ಹಾವೇರಿಯಲ್ಲಿ ನಡೆದ ನೈತಿಕ ಪೊಲೀಸಗಿರಿ ಬಗ್ಗೆ ಮಾತನಾಡಿ, ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಮೊದಲೇ ಅವರು ದೂರು ಕೊಟ್ಟಿಲ್ಲ. ನಂತರ ದೂರು ಕೊಟ್ಟಿದ್ದಾರೆ. ಅವರನ್ನು ಆಗಲೇ ಅರೆಸ್ಟ್ ಮಾಡಿದ್ದಾರೆ. ದೂರು ಕೊಟ್ಟಿದ್ದು ಸುಳ್ಳಾ, ಇಲ್ಲವಾ ಅನ್ನೊದನ್ನು ನೋಡಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಇಂತಹ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಲ್ಲ ಎಂದರು.