ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ

ತಿರುವನಂತಪುರಂ: ಪ್ರಧಾನಿ ಮೋದಿ ಅವರು ಇಂದು ಕೇರಳದಲ್ಲಿ ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ PSLV ಇಂಟಿಗ್ರೇಷನ್ ಫೆಸಿಲಿಟಿ , ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಹೊಸ ‘ಸೆಮಿ-ಕ್ರಯೋಜೆನಿಕ್ಸ್ ಇಂಟಿಗ್ರೇಟೆಡ್ ಇಂಜಿನ್ ಮತ್ತು ಸ್ಟೇಜ್ ಟೆಸ್ಟ್ ಸೌಲಭ್ಯ’, ತಿರುವನಂತಪುರದ VSSC ನಲ್ಲಿ ‘ಟ್ರೈಸಾನಿಕ್ ವಿಂಡ್ ಟನಲ್’ ಈ ಮೂರು ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಪ್ರಸ್ತುತ ಯೋಜನೆಗಳನ್ನ ಸುಮಾರು ₹1,800 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಗಗನ್‌ಯಾನ್ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸಿದ ಪ್ರಧಾನಿ ದೇಶದ ಮೊದಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ತರಬೇತಿ ಪಡೆಯುತ್ತಿರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಘೋಷಿಸಿದರು.

 

 

Font Awesome Icons

Leave a Reply

Your email address will not be published. Required fields are marked *