ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಾರಂಕಿ ಸಮೀಪದ ಸಲಾರ್ಪುರ ಗ್ರಾಮದ ಬಳಿ ಶಾಲಾ ಬಸ್ ಪಲ್ಟಿಯಾದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 32 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಮಕ್ಕಳನ್ನು ಲಖನೌದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂರತ್ಗಂಜ್ನ ಹರಕ್ಕ ಸಂಯುಕ್ತ ಶಾಲೆಯ ಮಕ್ಕಳು ಬಸ್ನಲ್ಲಿ ಲಖನೌಗೆ ಪಿಕ್ನಿಕ್ಗೆ ಹೋಗುವ ವೇಳೆ ಈ ಘಟನೆ ನಡೆದಿದೆ.
ಬೈಕ್ ಸವಾರನೊಬ್ಬನನ್ನು ರಕ್ಷಿಸಲು ಚಾಲಕ ಪ್ರಯತ್ನಿಸಿದ ವೇಳೆ, ಬಸ್ ಪಲ್ಟಿಯಾಗಿದೆ.