ಮೈಸೂರಿನಲ್ಲಿ ಪರಿಸರ ಸಂರಕ್ಷಣೆ ಕುರಿತು ವಾಕಥಾನ್

ಮೈಸೂರು: ಮೈಸೂರಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ನಗರದ ಕುಕ್ಕರಹಳ್ಳಿ ಕೆರೆಯ ಆವರಣದಲ್ಲಿ ಪರಿಸರ ಉಳಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಸಲುವಾಗಿ ವಾಕಥಾನ್ ಕಾರ್ಯಕ್ರಮವನ್ನು ನಡೆಸಲಾಯಿತು.

ಟ್ರಸ್ಟ್ ನ ಪ್ರತಿ ತಿಂಗಳ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಆರೋಗ್ಯವೇ ಭಾಗ್ಯ – ವ್ಯಾಯಾಮ ದೇಹಕ್ಕೆ ಅತ್ಯಗತ್ಯ ಮತ್ತು ಪ್ರಾಕೃತಿಕ ವನ್ಯ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ವಾಕಥಾನ್ ಕಾರ್ಯಕ್ರಮವನ್ನು ಶ್ರೀ ಅರ್ಜುನ ಅವಧೂತರು ಉದ್ಘಾಟಿಸಿ ತಾವೂ ಕೂಡ ವಾಕಥಾನ್ ನಲ್ಲಿ ಭಾಗವಹಿಸಿದ್ದರು.

ಹಲವು ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಮಂದಿ ವಾಕಥಾನ್ ನಲ್ಲಿ ಪಾಲ್ಗೊಂಡು ,‌ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ – ಜೀವ ಸಂಕುಲ ಉಳಿಸಿ , ಪರಿಸರ ರಕ್ಷಣೆ – ನಮ್ಮೆಲ್ಲರ ಹೊಣೆ , ಪ್ಲಾಸ್ಟಿಕ್ ಮುಕ್ತ ಮೈಸೂರು- ಮಾಡೋಣ ಬನ್ನಿ ಕೈ ಜೋಡಿಸಿ ,ಪ್ಲಾಸ್ಟಿಕ್ ಬಳಕೆ ಕೈಬಿಡಿ-ಬಟ್ಟೆ ಬ್ಯಾಗ್ ಬಳಸಿ , ಎಲ್ಲೆಂದರಲ್ಲಿ ಕಸ ಹಾಕಬೇಡಿ- ಕಸದ ಗಾಡಿಯವರಿಗೆ ಕೊಡಿ ಎಂಬ ಸ್ಲೋಗನ್ ಇರುವ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದರು.

ನಂತರ ಕಾಮಾಕ್ಷಿ ಆಸ್ಪತ್ರೆಯ ಸಹಯೋಗದೊಂದಿಗೆ ವಾಕಥಾನ್ ನಲ್ಲಿ ಭಾಗವಹಿಸಿದ್ದವರಿಗೆ, ವೈದ್ಯಕೀಯ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಹ ನಮ್ಮ ಟ್ರಸ್ಟ್ ನಡೆಸಲಾಯಿತು. ಈ ವೇಳೆ ನೂರಾರು ಮಂದಿ ಶುಗರ್ , ಬಿಪಿ , ತೂಕ , ಫಲ್ಸ್ ರೇಟ್ ಪರೀಕ್ಷೆ ಮಾಡಿಸಿಕೊಂಡರು.

ಗುರುಗಳು ನೆರೆದಿದ್ದ ಎಲ್ಲರಿಗೂ ಶುಭಕೋರಿ, ಆಶೀರ್ವದಿಸಿದರು. ತದನಂತರ ಭಾಗವಹಿಸಿದವರೆಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Font Awesome Icons

Leave a Reply

Your email address will not be published. Required fields are marked *