ಮೈಸೂರಿನಲ್ಲಿ ರನ್ ಫಾರ್ ನೇಷನ್, ರನ್ ಫಾರ್ ಮೋದಿ

ಮೈಸೂರು: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಾರಿ ಶಕ್ತಿ ಕಾರ್ಯಕ್ರಮದ ಅಡಿಯಲ್ಲಿ ರನ್ ಫಾರ್ ನೇಷನ್,  ರನ್ ಫಾರ್ ಮೋದಿ ಮ್ಯಾರಥಾನ್ ನಡೆಸಲಾಯಿತು.

ನಗರದ ನ್ಯಾಯಾಲಯದ ಮುಂಭಾಗದಿಂದ ಬಿಜೆಪಿ ಕಚೇರಿವರೆಗೆ ಮ್ಯಾರಥಾನ್ ನಡೆಯಿತು. ನ್ಯಾಯಾಲಯದ  ಮುಂಭಾಗದಿಂದ ಆರಂಭವಾದ ಮ್ಯಾರಥಾನ್ ಎಂ.ಜಿ.ರಸ್ತೆ, ಆರ್‌ಟಿಓ, ರಾಮಸ್ವಾಮಿ ವೃತ್ತದ ಮೂಲಕ ಬಿಜೆಪಿ ಕಚೇರಿಯಲ್ಲಿ ಅಂತ್ಯವಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ  ನೇತೃತ್ವದಲ್ಲಿ ನಾರಿ ಶಕ್ತಿ ವಂದನ ಮೂಲಕ ಪ್ರತಿ ರಾಜ್ಯದಲ್ಲಿನ ಸ್ವಸಹಾಯ ಸಂಘಗಳಿಗೆ ನಗರ ಮತ್ತು ಗ್ರಾಮೀಣ ಭಾಗದ ಸ್ತ್ರೀಯರಿಗೆ ಕೇಂದ್ರದ ಹಲವಾರು ಯೋಜನೆಗಳನ್ನು ತಲುಪಿಸುವುದು ಹಾಗೂ ತಿಳುವಳಿಕೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶ.

ಮೋದಿ ಅವರ ಹಲವಾರು ಯೋಜನೆಗಳು ಸ್ವ-ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿವೆ. ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮೋದಿ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಕೈಗೊಂಡಿರುವ ಯೋಜನೆಗಳನ್ನು ನಗರ ಹಾಗೂ ಗ್ರಾಮದ ಪ್ರತಿಯೊಬ್ಬ ಸ್ತ್ರೀಯರಿಗೂ ಮುಟ್ಟಿಸುವ ಕೆಲಸವಾಗಬೇಕು ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್, ನಗರ ಪ್ರಧಾನ ಕಾರ್ಯದರ್ಶಿಗಳಾದ  ಎಚ್.ಜಿ.ಗಿರಿಧರ್, ಕೇಬಲ್ ಮಹೇಶ್, ಬಿ.ಎಂ.ರಘು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಮಮತಾ ಶೆಟ್ಟಿ, ಮಹಿಳಾ ವಿಭಾಗದ ಪ್ರಭಾರಿ ಹೇಮ ನಂದೀಶ್, ಮಾಜಿ ಉಪ ಮೇಯರ್ ಡಾ.ರೂಪ, ಮಾಜಿ ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಲಕ್ಷ್ಮಿ ಕಿರಣ್ ಗೌಡ, ಸೌಭಾಗ್ಯ ಮೂರ್ತಿ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನಿಲ್ ಥಾಮಸ್, ಎನ್.ವಿ.ಪಣೀಶ್, ಹೇಮಂತ್ ಕುಮಾರ್ ಗೌಡ, ಜಯಪ್ರಕಾಶ್ ಗೌಡ, ಹಾಗೂ ಇನ್ನಿತರ ಮೋರ್ಚಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

Font Awesome Icons

Leave a Reply

Your email address will not be published. Required fields are marked *