ಮೈಸೂರಿನಲ್ಲಿ ವಿದೇಶಿಗರಿಂದ ಹೋಮ ಹವನ, ಪೂಜೆ ಪುನಸ್ಕಾರ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಅಕ್ಟೋಬರ್,16,2024 (www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಮೇರಿಕಾದ ವಿವಿಧ ಭಾಗಗಳಿಂದ ಆಗಮಿಸಿರುವ ವಿದೇಶಿಗರು ನಾಡಿನ ಒಳಿತು, ಶಾಂತಿಗಾಗಿ  ಹೋಮ ಹವನ, ಪೂಜೆ  ಪುನಸ್ಕಾರ ಹಮ್ಮಿಕೊಂಡಿದ್ದರು.

ಡಾ.ಶಲ್ವಪಿಳೈ ಅಯ್ಯಂಗಾರ್ ನೇತೃತ್ವದಲ್ಲಿ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ನಿವಾಸದಲ್ಲಿ ವಿದೇಶಿಗರು ಹೋಮ ಹವನ , ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ಹಿರಿಯ ಅರ್ಚಕ ಸಕ್ರೆಪೊಂಗಲ್ ಅಯ್ಯಂಗಾರ್ ಅವರಿಂದ ಪೂಜಾ ವಿಧಿವಿಧಾನ ಆರಂಭವಾಯಿತು.  ವಿಜಯಲಕ್ಷ್ಮಿ ದೇವರ ಆರಾಧನೆ ಬಳಿಕ ಹೋಮ ಹವನ ನಡೆಸಲಾಯಿತು.

ಪ್ರಪಂಚದಲ್ಲಿ ನಡೆಯುತ್ತಿರುವ ಗಲಭೆ, ಯುದ್ಧಗಳು ನಿಲ್ಲಲಿ. ಹಿಂದೂ ಸಂಪ್ರದಾಯ ಪ್ರಗತಿ ಕಾಣಲಿ ಎಂಬ ಉದ್ದೇಶದಿಂದ ಈ ಪೂಜೆ ಪುನಸ್ಕಾರ ಹಮ್ಮಿಕೊಳ್ಳಲಾಗಿತ್ತು ಎನ್ನಲಾಗಿದೆ.

ಈ ಕಾರ್ಯಕ್ರಮದಲ್ಲಿ Amanda, Vanessa Sanchez, Michelle Badillo , Maria F Badillo, Brenda Lemus, Viviana Hernandez , Asha Del Valle Ramakrishna ,Marcela Gutierrez, Nesrin Oliveros,Hallie Lifsonl, kalki dasa ಭಾಗಿಯಾಗಿದ್ದರು.

Key words: foreigners, Mysore, Pooje Punaskara, worship

Font Awesome Icons

Leave a Reply

Your email address will not be published. Required fields are marked *