ಮೈಸೂರು, ಸೆ.24,2024: (www.justkannada.in news) ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2024ರ ಯುವದಸರಾ ಕಾರ್ಯಕ್ರಮದ ಸ್ಥಳ ಬದಲು ಬೆನ್ನಲ್ಲೇ, ಯುವ ದಸರಾ ವೀಕ್ಷಣೆಗೆ ಟಿಕೆಟ್ ನಿಗಧಿಗೊಳಿಸಿರುವ ಬಗೆಗೂ ಮಾಹಿತಿ ಹೊರ ಬರುತ್ತಿದೆ.
ಮೂಲಗಳ ಪ್ರಕಾರ, ಯುವ ದಸರಾ ಕಾರ್ಯಕ್ರಮದ ವೇದಿಕೆ ಬಳಿ ವಿಶೇಷ ಐಷರಾಮಿ ಆಸನದ ವ್ಯವಸ್ಥೆ ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ ೫೦೦೦ ರೂ. ಗಳ ಟಿಕೆಟ್ ನಿಗಧಿ ಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ವರ್ಷದ ಯುವ ದಸರಾ ಕಾರ್ಯಕ್ರಮದಲ್ಲಿ ತಮಿಳು ಚಲನಚಿತ್ರರಂಗದ ಸಂಗೀತ ಮಾಂತ್ರಿಕರಾದ ಇಳಯರಾಜ ಹಾಗೂ ಎ.ಆರ್.ರೆಹಮಾನ್ ಅವರನ್ನು ಆಹ್ವಾನಿಸುವ ಸಂಬಂಧ ಮಾತುಕತೆ ನಡೆದಿದ್ದು ಅಂತಮಗೊಳ್ಳುವ ಹಂತದಲ್ಲಿದೆ. ಅತ್ಯಂತ ದುಬಾರಿ ಸಂಗೀತಗಾರರಾದ ಈ ಇಬ್ಬರು ಯುವ ದಸರಾ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಆಹ್ವಾನಿಸುತ್ತಿರುವ ಕಾರಣ, ಹೆಚ್ಚುವರಿ ಆರ್ಥಿಕ ಹೊರೆಯನ್ನು ಟಿಕೆಟ್ ಮಾರಾಟದ ಮೂಲಕ ಭರಿಸಲು ಜಿಲ್ಲಾಡಳಿತ ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.
ಸ್ಥಳ ಬದಲಾವಣೆ ಲೆಕ್ಕಚಾರ:
ಮಹಾರಾಜ ಕಾಲೇಜು ಮೈದಾನದಿಂದ, ಮೈಸೂರು ಹೊರವಲಯದ ಉತ್ತನಹಳ್ಳಿ ದೇವಸ್ಥಾನದ ಹತ್ತಿರ ಸ್ಥಳ ಬದಲು. ವಿಶಾಲ ಪ್ರದೇಶವಾಗಿರುವ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲು ಚಿಂತನೆ. ಈವರಗೆ ನಡೆಯುತ್ತಿದ್ದ ಕಾರ್ಯಕ್ರಮ ಸ್ಥಳ ಬದಲು. ಸ್ಥಳ ಬದಲಾವಣೆಯ ಹಿಂದೆ ಹಲವು ಲೆಕ್ಕಾಚಾರ.
ಈ ಹಿಂದೆ ಮಾನಸಗಂಗೋತ್ರಿ ಅಂಗಳದ ಬಯಲು ರಂಗಮಂದಿರದಲ್ಲಿ ನಡೆಯುತ್ತಿದ್ದ ಯುವದಸರಾ.
ಕಳೆದ ಏಳೆಂಟು ವರ್ಷದಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಶಿಫ್ಟ್ ಆಗಿತ್ತು. ಈಗ ಮಹಾರಾಜ ಕಾಲೇಜು ಮೈದಾನದಿಂದಲೂ ಯುವದಸರಾ ಶಿಫ್ಟ್. ಸ್ಥಳ ಬದಲಾವಣೆ ಕುರಿತು ಪರ- ವಿರೋಧ ಚರ್ಚೆ ಆರಂಭ
ನಗರದ ಹೊರ ಭಾಗಕ್ಕೆ ಶಿಫ್ಟ್ ಮಾಡಿದರೆ ಜನರಿಗೆ ಅನಾನುಕೂಲ. ರಾತ್ರಿ ಕಾರ್ಯಕ್ರಮ ಮುಗಿಸಿ ಬರಲು ಕಷ್ಟಸಾಧ್ಯ. ಮಧ್ಯರಾತ್ರಿ ಕಾರ್ಯಕ್ರಮ ಮುಗಿದ ಬಳಿಕ ವಸತಿ ಪ್ರದೇಶಗಳಿಗೆ ಬರಲು ತೊಂದರೆ. ನಗರದಿಂದ ದೂರ ಇರುವ ಕಾರಣ ಪ್ರವಾಸಿಗರಿಗೆ ತೊಂದರೆ. ದಸರೆಯ ಇತರೆ ಕಾರ್ಯಕ್ರಮಗಳ ವೀಕ್ಷಣೆಗೆ ತೊಡಕು. ರಿಂಗ್ ರಸ್ತೆಗೆ ಬಸ್ ಗಳ ಬಾರದ ಕಾರಣ ಅನಾನುಕೂಲ . ಮಹಿಳೆಯರು, ಮಕ್ಕಳು, ವಯಸ್ಕರಿಗೆ ಕಷ್ಟ.
ದಸರೆ ವೇಳೆ ಹೆಚ್ಚು ಪ್ರವಾಸಿಗರು ಆಗಮಿಸುವುದರಿಂದ ಜನದಟ್ಟಣೆ, ಟ್ರಾಫಿಕ್ ಸಮಸ್ಯೆ ರಿಂಗ್ ರಸ್ತೆಗಳಲ್ಲೂ ಎದುರಾಗಬಹುದು.
ವಿಶಾಲವಾದ ಪ್ರದೇಶವಾದ ಕಾರಣ ಟ್ರಾಫಿಕ್ ಸಮಸ್ಯೆ ಉದ್ಭವಿಸಲ್ಲ. ಸಾವಿರಾರು ಕಾರು, ಬೈಕ್ ಗಳ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದು. ಲಕ್ಷ ಮಂದಿ ಕಾರ್ಯಕ್ರಮ ವೀಕ್ಷಣೆ ಮಾಡಿದರೂ ಜನದಟ್ಟಣೆ ಆಗುವುದಿಲ್ಲ. ನಗರದ ಹೊರಭಾಗದಲ್ಲಿ ಆಯೋಜನೆಯಿಂದ ಗ್ರಾಮೀಣ ಭಾಗದವರು ಪಾಲ್ಗೊಳ್ಳಬಹುದು.
key words: Yuva Dasara, shift to, Mysuru outskirts,Ilayaraja, Rahman, major attractions