ಗದಗ: ಪ್ರಾಂಶುಪಾಲರ ಮೊಬೈಲ್ ಕಳ್ಳತನ ಮಾಡಿದ ದುಷ್ಕರ್ಮಿಗಳು ಮೊಬೈಲ್ನ ಆನ್ಲೈನ್ ಆ್ಯಪ್ ಮೂಲಕ ₹1.40 ಲಕ್ಷ ಹಣ ವರ್ಗಾವಣೆ ಮಾಡಿಕೊಂಡ ಘಟನೆ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರಾಂಶುಪಾಲರಾದ ಶ್ರೀಕಾಂತ ಕೃಷ್ಣಾಜಿ ಜೋಷಿ ಅವರು ಎಂದಿನಂತೆ ಕಾಲೇಜ್ಗೆ ತೆರಳುತ್ತಿದ್ದ ವೇಳೆ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು 20 ಸಾವಿರ ಮೌಲ್ಯದ ಮೊಬೈಲ್ ಅನ್ನು ಪ್ರಾಂಶುಪಾಲರ ಜೇಬಿನಿಂದ ಕಳ್ಳತನ ಮಾಡಿದ್ದಾರೆ.
ಬಳಿಕ ಮೊಬೈಲ್ನಲ್ಲಿದ್ದ ಎಸ್ಬಿಐ ಖಾತೆಯ ಯುಪಿಐ ಬಳಸಿಕೊಂಡು ಬರೋಬ್ಬರಿ 1 ಲಕ್ಷದ 40 ಸಾವಿರ ರೂಗಳನ್ನ ತಮ್ಮ ಅಕೌಂಟ್ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಮೊದಲು ₹75 ಸಾವಿರ, ₹50 ಸಾವಿರ ಹಾಗೂ ₹15 ಸಾವಿರ ಎಂಬಂತೆ ಒಟ್ಟು ಮೂರು ಹಂತದಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.