ವಿಧಾನಸಭೆ: ‘ಮೋದಿ ಗ್ಯಾರಂಟಿ’ ಎಂದು ನಮ್ಮ ಗ್ಯಾರಂಟಿಯನ್ನು ಕೇಂದ್ರ ಸರ್ಕಾರ ಕದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಗುರುವಾರ ಪ್ರತಿಪಕ್ಷ ಸಭಾತ್ಯಾಗದ ನಡುವೆ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಪಿಎಂ ಆವಾಸ್ ಯೋಜನೆಯಡಿ 5-0 ಲಕ್ಷ ರು. ರಾಜ್ಯ ಸರ್ಕಾರ ನೀಡಿದರೆ, ಕೇಂದ್ರ 1.50 ಲಕ್ಷ ರು. ನೀಡುತ್ತದೆ. ಅದರ ಜೊತೆಗೆ 1.38 ಲಕ್ಷ ಬಿಎಸ್ಪಿ ಸೇರಿ ಒಂದು ಮನೆಗೆ ಕೇಂದ್ರ ಸರ್ಕಾರ ನೀಡುವುದು ಕೇವಲ 12 ಸಾವಿರ ರು. ಮಾತ್ರ. ಬಡವರ ಮನೆ ನಿರ್ಮಾಣದ ಹೆಸರನ್ನಿಸಿಕೊಂಡು ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ನಮ್ಮ ಹೆಸರಿಲ್ಲ, ಇದು ಯಾವ ನ್ಯಾಯ? ಮೋದಿ ಗ್ಯಾರಂಟಿ ಎಂದು ನಮ್ಮ ಗ್ಯಾರಂಟಿ ಕದ್ದಿದ್ದಾರೆ ಎಂದರು.