ಯುಗಾದಿಯಂದು ಮುಸ್ಲಿಂ ಭಕ್ತರಿಂದ ಈ ದೇವಸ್ಥಾನಕ್ಕೆ ವಿಶೇಷ ಪೂಜೆ

ಆಂಧ್ರಪ್ರದೇಶ: ತೆಲುಗು ರಾಜ್ಯದ ಕಡಪಾ ಜಿಲ್ಲೆಯಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮುಸ್ಲಿಂ ಬಾಂಧವರು ಹೆಚಿನ ಸಂಖ್ಯೆಯಲ್ಲಿ  ಭೇಟಿ ನೀಡುತ್ತಾರೆ. ಈ ದೇವಾಲಯವು ಶ್ರೀ ವೆಂಕಟೇಶ್ವರನ ನೆಲೆಯಾದ ತಿರುಮಲ ತಿರುಪತಿಯಿಂದ 120 ಕಿ.ಮೀ ದೂರದಲ್ಲಿದೆ. ಹಬ್ಬದ ಪ್ರಯುಕ್ತ ವಿಷೇಶ ಪೂಜೆ ಸಲ್ಲಿಸಿ ಭಗವಂತನ ಆಶಿರ್ವಾದಕ್ಕೆ ಪಾತ್ರರಾಗುತ್ತಾರೆ.ಭಾರತ ಒಂದು ಜಾತ್ಯತೀತ ರಾಷ್ಟ್ರ.

ಭಾರತೀಯರು ತಮ್ಮ ಧಾರ್ಮಿಕ ಆಚರಣೆಗಳನ್ನು ಪ್ರತ್ಯೇಕವಾಗಿ ಆಚರಿಸುತ್ತಾರೆ. ಹಾಗೂ ಯಾವುದೆ ಭೇದ ವಿಲ್ಲದೆ ಇತರ ಧಾರ್ಮಿಕ ಆಚರಣೆಗಳಲ್ಲು ಪಾಲ್ಗೊಂಡು ಸಂಭ್ರಮಿಸುತ್ತಾರೆ. ಇದೀಗ ಆಂಧ್ರ ಪ್ರದೇಶದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬಕ್ಕೆ ಹಿಂದೂಗಳು ಮಾತ್ರವಲ್ಲ, ಮುಸ್ಲಿಮರೂ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಷೇಶ.

ಆದರೆ ಇದರ ಹಿಂದೆ ಬಲವಾದ ಕಾರಣವಿದೆ. ರಾಯಲಸೀಮಾ ಭಾಗದ ಮುಸ್ಲಿಮರು ಪ್ರತಿ ವರ್ಷ ಯುಗಾದಿಯಂದು ದೇವರ ದರ್ಶನ ಮಾಡುವುದು ಹಿಂದಿನಿಂದಲು ಸಂಪ್ರದಾಯವಾಗಿದೆ. ‘ನಾನು ಚಿತ್ತೂರಿನ ನಿವಾಸಿಯಾಗಿದ್ದು, ಯುಗಾದಿ ದಿನದಂದು ಇಲ್ಲಿಗೆ ಪ್ರಾರ್ಥನೆಗೆ ಬರುತ್ತೇನೆ. ಜನವರಿ 1 ನಮಗೆ ಹೊಸ ವರ್ಷವಲ್ಲ.. ಯುಗಾದಿ ಹೊಸ ವರ್ಷ. ಯುಗಾದಿ ಹಬ್ಬವನ್ನು ರಂಜಾನ್‌ನಂತೆ ಆಚರಿಸುತ್ತೇವೆ. ನಾವು ದೇವರನ್ನು ಪ್ರಾರ್ಥಿಸಲು, ತೆಂಗಿನಕಾಯಿ ಹೊಡೆಯಲು ಮತ್ತು ದೇವರ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತೇವೆ. ನಮ್ಮ ಹಿರಿಯರೂ ಯುಗಾದಿಗೆ ಇಲ್ಲಿಗೆ ಬಂದು ಆ ಸಂಪ್ರದಾಯ ಪಾಲಿಸುತ್ತಿದ್ದರು‘ ಎಂದು ದೇವರ ಆಶೀರ್ವಾದ ಪಡೆಯಲು ಬಂದಿದ್ದ ಮುಸ್ಲಿಂ ಭಕ್ತರೊಬ್ಬರು ಹೇಳಿದರು.

ಹಾಗೂ ಯುಗಾದಿ ಮೊದಲೆ ಮಾಂಸ ಸೇವಿಸುವುದನ್ನು ನಿಲ್ಲಿಸಿ, ದೇವರಿಗೆ ಅನ್ನ, ಮಸಾಲೆಯುಕ್ತ ಆಹಾರ ಮತ್ತು ಬೆಲ್ಲವನ್ನು ಅರ್ಪಿಸುತ್ತಾರೆ.ವೆಂಕಟೇಶ್ವರ ಸ್ವಾಮಿಯು ಕ್ರಿ.ಶ. 1311 ರಲ್ಲಿ ಮಲಿಕ್ ಕಫೂರ್ ಎಂಬ ಸೇನಾಧಿಪತಿ ಮಗಳು ಬೀಬಿ ನಾಂಚಾರಮ್ಮನನ್ನು ಮದುವೆಯಾದರು ಎಂಬುದು ಅವರ ನಂಬಿಕೆ.

Font Awesome Icons

Leave a Reply

Your email address will not be published. Required fields are marked *