ವಿಜಯಪುರ ,ಡಿಸೆಂಬರ್,3,2024 (www.justkannada.in): ಯುವಕ ಚುಡಾಯಿಸಿದ್ದಕ್ಕೆ ಮನನೊಂದು ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ
ಪ್ರೀತಿ ಪ್ರೇಮದ ಹೆಸರಿನಲ್ಲಿ ಸಂಗಮೇಶ್ ಜಂಜವಾರ್ ಎಂಬ ಯುವಕ ಅಪ್ರಾಪ್ತ ಬಾಲಕಿ ಹಿಂದೆ ಬಿದ್ದಿದ್ದ. ಕಾಲೇಜಿಗೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಸಂಗಮೇಶ್ ಬಾಲಕಿಗೆ ಚುಡಾಯಿಸುತ್ತಿದ್ದ. ಅಲ್ಲದೇ ಅಪ್ರಾಪ್ತೆಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಇದನ್ನು ಪ್ರಶ್ನಿಸಿದ ಬಾಲಕಿಯ ಸಹೋದರಿಗೆ ಸಂಗಮೇಶ್ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದನು ಎಂಬ ಆರೋಪವಿದ್ದು ಈ ಕುರಿತು ಬಾಲಕಿ ನವೆಂಬರ್ 27 ರಂದು ಮುದ್ದೇನಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಂಗಮೇಶ್ ಸೇರಿ ಮೂವರನ್ನು ಬಂಧಿಸಿದ್ದರು.
ಆದರೆ ಇದೆಲ್ಲದ್ದರಿಂದ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
Key words: minor girl, commits suicide, teased, young man