ಯೆನಪೊಯಾದಲ್ಲಿ ಯಶಸ್ವಿಯಾಗಿ ನಡೆದ “ಯೆನ್ ಮ್ಯೂಸಿಮೆಡ್ 2024” ಕಾರ್ಯಾಗಾರ

ಮಂಗಳೂರು: ಸಂಗೀತ ಚಿಕಿತ್ಸೆ ಆಧುನಿಕ ವೈದ್ಯಕೀಯ ಚಿಕಿತ್ಸೆಗಳಿಗೆ ಆವಶ್ಯಕ ಪೂರಕವಾಗಿ ಮಾನ್ಯತೆ ಪಡೆಯುತ್ತಿದೆ. ಇದು ಸಮಗ್ರ ಆರೈಕೆಗಾಗಿ ಹೊಸ ಮಾರ್ಗಗಳನ್ನು ತೆರೆಯುತ್ತಿದೆ. ಯೆನಪೊಯಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯು 2024 ಸೆಪ್ಟೆಂಬರ್ 11ರಿಂದ 13ರ ವರೆಗೆ ಯೆನ್ ಮ್ಯೂಸಿಮೆಡ್ 2024 ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿತು.

ನ್ಯೂರೊಡಿಜೆನೆರೆಟಿವ್ ಡಿಸಾರ್ಡರ್‌ಗಳು ಮತ್ತು ಪಾಲಿಯೇಟಿವ್ ಕೇರ್‌ನಲ್ಲಿ ಗುಣಮಟ್ಟದ ಜೀವನವನ್ನು ಹೆಚ್ಚಿಸಲು ಸಂಗೀತ ಚಿಕಿತ್ಸೆ ಏಕೀಕೃತಗೊಳಿಸುವುದು ಎಂಬ ವಿಷಯದ ಮೇಲೆ ಕೇಂದ್ರೀಕರಿಸಿತು. ಈ ಕಾರ್ಯಾಗಾರದಲ್ಲಿ ವಿವಿಧ ವೈದ್ಯಕೀಯ ವಿಭಾಗಗಳ ವೈದ್ಯರು ಮತ್ತು ಉಪವೈದ್ಯಕೀಯ ತಜ್ಞರು ಪಾಲ್ಗೊಂಡರು.

ಯೆನಪೊಯಾ ಮೆಡಿಕಲ್ ಕಾಲೇಜಿನ ಹಿರಿಯ ನಾಗರಿಕ ವೈದ್ಯಕೀಯ ವಿಭಾಗವು ಮೂರು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಗಾರವನ್ನು ಯೆನೆಪೋಯ ವೈದ್ಯಕೀಯ ವಿದ್ಯಾಲಯದ ಪ್ರಾಂಶುಪಾಲರಾದ ಡಾ. EM ಎಸ್ ಮೂಸಬ್ಬ ಉದ್ಘಾಟಿಸಿದರು.

ಡ

ಕಿವಿ, ಮೂಗು ಗಂಟಲು ವಿಭಾಗದಲ್ಲಿ ಪ್ರಾಧ್ಯಾಪಕರು ಹಾಗೂ ಸಂಗೀತ ಚಿಕಿತ್ಸಕರಾದ ಡಾ.ವಿಜಯಲಕ್ಷ್ಮಿ ಸುಬ್ರಹ್ಮಣ್ಯಂ, ವಾಕ್ ಶ್ರವಣ ವಿಭಾಗದ ಉಪ ಪ್ರಾಧ್ಯಾಪಕಿ ಶ್ರೀಮತಿ ಪಾವನ ಎಂ ಜೆ ಮೊದಲನೆಯ ದಿನ ಮೆದುಳು ಹಾಗೂ ನರರೋಗಗಳಿಗೆ ಸಂಗೀತ ಚಿಕಿತ್ಸೆಯ ಪ್ರಾತ್ಯಕ್ಷಿಕೆಯನ್ನು ನಡೆಸಿದರು.

ಎರಡನೇ ದಿನ, ಡಾ. ಅನಿಲ್ ಸಾಂಗ್ಲಿ ಮತ್ತು ಶ್ರೀ ಶ್ರೀಪಾದ್ ಎಸ್ ಅವರು ಸಂಗೀತ ಮತ್ತು ನ್ಯೂರೋಸೈನ್ಸ್ ಕುರಿತು ಉಪನ್ಯಾಸ ಮಾಡಿದರು. ಅವರು ರೋಗಿಗಳ ನಿಜ ಜೀವನದ ಉದಾಹರಣೆಗಳನ್ನು ಉಲ್ಲೇಖಿಸಿ ವಿಡಿಯೋಗಳನ್ನು ತೋರಿಸಿ ಸಂಗೀತದಿಂದ ಮೆದುಳಿನ ಪುನಶ್ಚೇತನ ಮತ್ತು ಹೊಂದಾಣಿಕೆಗೆ ಆಗುವ ಪ್ರಭಾವವನ್ನು ತೋರಿಸಿದರು.

ನಂತರದ ಕಾರ್ಯಾಗಾರದಲ್ಲಿ, ಅಂತರರಾಷ್ಟ್ರೀಯ ಸಂಗೀತ ಚಿಕಿತ್ಸಾತಜ್ಞೆ ಡಾ.ಕಾರ್ಡುಲಾ ಡೀಟ್ರಿಚ್, ಉಪ ಶಾಮಕ ಆರೈಕೆಯಲ್ಲಿ ಸಂಗೀತ ಚಿಕಿತ್ಸೆಯ ಕುರಿತು ಕಾರ್ಯಾಗಾರ ನಡೆಸಿದರು. ಇವರು ಬಾಡಿ ತಂಬೂರದ ಮೂಲಕ ಸಂಗೀತ ಚಿಕಿತ್ಸೆಯನ್ನು ಹೇಗೆ ನೀಡುವುದು ಎಂಬುದನ್ನು ತಿಳಿಸಿಕೊಟ್ಟರು.

Font Awesome Icons

Leave a Reply

Your email address will not be published. Required fields are marked *