ರವಿ ಶಾಸ್ತ್ರಿ, ಫಾರೂಕ್ ಇಂಜಿನಿಯರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಹೈದರಾಬಾದ್: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಜೀವಮಾನದ ಸಾಧನೆ ಪ್ರಶಸ್ತಿಗೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಭಾಜನರಾಗಿದ್ದಾರೆ.

ಉದಯೋನ್ಮುಖ ಕ್ರಿಕೆಟಿಗ ಶುಭಮನ್ ಗಿಲ್ ಅವರು 2022-23ನೇ ಸಾಲಿನ ‘ವರ್ಷದ ಕ್ರಿಕೆಟಿಗ’ ಪ್ರಶಸ್ತಿ ಪಡೆದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅತ್ಯುತ್ತಮ ಪದಾರ್ಪಣೆ ಪ್ರಶಸ್ತಿಗೆ 2019-20: ಮಯಂಕ್ ಅಗರವಾಲ್., 2020-21: ಅಕ್ಷರ್ ಪಟೇಲ್., 2021-22: ಶ್ರೇಯಸ್ ಅಯ್ಯರ್., 2022-23: ಯಶಸ್ವಿ ಜೈಸ್ವಾಲ್ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗ (ಪಾಲಿ ಉಮ್ರಿಗಾರ್ ಪ್ರಶಸ್ತಿ) 2019- 20: ಮೊಹಮ್ಮದ್ ಶಮಿ., 2020-21: ಆರ್. ಅಶ್ವಿನ್., 2021-22: ಜಸ್‌ಪ್ರೀತ್ ಬೂಮ್ರಾ., 2022-23: ಶುಭಮನ್ ಗಿಲ್ ಪಡೆದುಕೊಂಡಿದ್ದಾರೆ. ಇನ್ನು ದಿಲೀಪ್ ಸರ್ದೇಸಾಯಿ ಪ್ರಶಸ್ತಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ – 2022-23 (ಭಾರತ vs ವೆಸ್ಟ್‌ಇಂಡೀಸ್): ಆರ್. ಅಶ್ವಿನ್., ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ – 2022-23 (ಭಾರತ vs ವೆಸ್ಟ್‌ಇಂಡೀಸ್): ಯಶಸ್ವಿ ಜೈಸ್ವಾಲ್ ಭಾಜನರಾಗಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *