ರಾಜ್ಯದಲ್ಲಿಂದು 296 ಜನರಿಗೆ ಕೊರೊನಾ ಸೋಂಕು ದೃಢ !

ಬೆಂಗಳೂರು: ರಾಜ್ಯದಲ್ಲಿ ಇಂದು 296 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮೈಸೂರಿನಲ್ಲಿ ಓರ್ವ ವ್ಯಕ್ತಿ ಬಲಿ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು 131 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

ಆ ಮೂಲಕ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 5.89 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಮಾಹಿತಿ ನೀಡಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 5,021 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, 1,245 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. 50 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಮೈಸೂರು 29, ಹಾಸನ 17, ತುಮಕೂರು ಜಿಲ್ಲೆಯಲ್ಲಿ 16, ದಕ್ಷಿಣ ಕನ್ನಡ 13, ಬಳ್ಳಾರಿ 11, ಮಂಡ್ಯ ಜಿಲ್ಲೆಯಲ್ಲಿ 9, ಕೋಲಾರ 7, ಶಿವಮೊಗ್ಗ 7, ಚಿಕ್ಕಬಳ್ಳಾಪುರ 6, ಗದಗ 6, ಬೆಂಗಳೂರು ಗ್ರಾಮಾಂತರ 5, ಚಾಮರಾಜನಗರ ಜಿಲ್ಲೆಯಲ್ಲಿ 5, ದಾವಣಗೆರೆ 4, ಧಾರವಾಡ 4, ಕಲಬುರಗಿ 4, ಕೊಪ್ಪಳ 4, ವಿಜಯನಗರ 4 ಕೇಸ್​​. ಬಾಗಲಕೋಟೆ 3, ಬೆಳಗಾವಿ 2, ಬೀದರ್ 2, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಇಬ್ಬರಿಗೆ, ರಾಯಚೂರು, ರಾಮನಗರ, ಉಡುಪಿ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆ ಆಗಿದೆ.

Font Awesome Icons

Leave a Reply

Your email address will not be published. Required fields are marked *