ಬೆಂಗಳೂರು: ರಾಜ್ಯದಲ್ಲಿ ಈವರೆಗೆ 199 ಜನರಲ್ಲಿ ಜೆಎನ್.1 ದೃಢ ಪಟ್ಟಿದೆ. ಜಿನೋಮಿಕ್ ಸ್ವೀಕೆನ್ಸ್ ವರದಿಯಲ್ಲಿ 199 ಮಂದಿಗೆ ಜೆಎನ್.1 ಸೋಂಕು ತಗುಲಿರೋದು ದೃಢಪಟ್ಟಿದೆ. ಈವರೆಗೆ ಜಿನೋಮ್ ಸೀಕ್ವೆನ್ಸ್ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ ರವಾನಿಸಲಾಗಿತ್ತು. ಡಿಸೆಂಬರ್ 25ರಂದು ಹೊರ ಬಿದ್ದ ಮೊದಲ ರಿಪೋರ್ಟ್ ನಲ್ಲಿ 60 ಸ್ಯಾಂಪಲ್ ಗಳ ಪೈಕಿ 34 ಮಂದಿಗೆ ಜೆಎನ್ 1 ತಗುಲಿರೋದು ಪತ್ತೆಯಾಗಿದೆ.
ಸೋಮವಾರ ಮತ್ತೆ 202 ಮಾದರಿಗಳ ವರದಿಯಲ್ಲಿ 165 ಮಂದಿಯಲ್ಲಿ ಜೆಎನ್1 ದೃಢಪಟ್ಟಿದೆ. ಇಲ್ಲಿಯವರೆಗೆ 199 ಜನರಿಗೆ ಜೆ.ಎನ್ 1 ವೈರಸ್ ಸೋಂಕು ತಗುಲಿದೆ. 28 ಜನರಿಗೆ ಎಕ್ಸ್‌ಬಿಬಿ ಉಪ ತಳಿ ಸೋಂಕು ಇದ್ದು, 35 ಮಂದಿಯಲ್ಲಿ ಇತರೆ ರೂಪಾಂತರಿ ಸೋಂಕು ದೃಢಪಟ್ಟಿದೆ.
ಈ ಮುಂಚೆ ಕೋವಿಡ್‌ನ ರೂಪಾಂತರಿ ಪತ್ತೆಗೆ ಗಂಟಲ ದ್ರವದ ಮಾದರಿಗಳನ್ನಷ್ಟೇ ಜಿನೋಮ್ ಸೀಕ್ವೆನ್ಸಿಂಗ್ ಡಿಎನ್‌ಎ ಜೋಡಣೆಯ ಕ್ರಮದ ಮೂಲಕ ಪತ್ತೆ ಪರೀಕ್ಷೆ ನಡೆಸಲಾಗುತ್ತಿತ್ತು. ಆದ್ರೆ ಈಗ ಒಳಚರಂಡಿಯ ಕೊಳಚೆ ನೀರನ್ನೂ ಪರೀಕ್ಷೆಗೊಳಪಡಿಸಿ, ರೂಪಾಂತರಿ ತಳಿಗಳ ಪತ್ತೆ ಕಾರ್ಯವನ್ನ ಸರ್ಕಾರ ಕೈಗೊಂಡಿದೆ.