ಬೆಂಗಳೂರು,ನವೆಂಬರ್,21,2024 (www.justkannada.in): ರಾಜ್ಯದಲ್ಲಿ 1,02,509 ಬಿಪಿಎಲ್ ಕಾರ್ಡ್ ಗಳು ಅನರ್ಹಗೊಳಿಸಲಾಗಿದೆ. ಆದರೆ ಅರ್ಹರ ಬಿಪಿಎಲ್ ಕಾರ್ಡುಗಳನ್ನ ರದ್ದು ಮಾಡಿಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಸಚಿವ ಕೆ.ಎಚ್ ಮುನಿಯಪ್ಪ, ಅರ್ಹರಿರುವ ಯಾವುದೇ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿಲ್ಲ. ಆದಾಯ ತೆರಿಗೆದಾರರ ಮಾಹಿತಿ ಪಡೆದು ಕಾರ್ಡ್ ರದ್ದು ಮಾಡಲಾಗಿದೆ. ಸರ್ಕಾರಿ ನೌಕರರನ್ನ ಪರಿಶೀಲಿಸಿ ಎಪಿಎಲ್ ಕಾರ್ಡ್ ಗೆ ವರ್ಗಾವಣೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 66ರಷ್ಟು ಬಿಪಿಎಲ್ ಕಾರ್ಡ್ ಗಳಿವೆ. ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡಲಾಗಿದೆ, ಬಿಪಿಎಲ್ ಗೆ ಅರ್ಹರಿದ್ದು ಎಪಿಎಲ್ ಗೆ ಸೇರ್ಪಡೆಯಾಗಿದ್ದರೇ ಅಂತವರಿಗೆ ಬಿಪಿಎಲ್ ಕಾರ್ಡ್ ಹಂಚಿಕೆ ಮಾಡುತ್ತೇವೆ. ಅನರ್ಹ ಇರಬಹುದು ಎಂದು ಕಾರ್ಡ್ ಗಳನ್ನ ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರನ್ನ ಹೊರತುಪಡಿಸಿ ಉಳಿದವರೆಲ್ಲರಿಗೂ ಬಿಪಿಎಲ್ ಕಾರ್ಡ್ ನೀಡಲಾಗುತ್ತೆ ಎಂದರು.
ಬಿಪಿಎಲ್ ಕಾರ್ಡುದಾರರು 98,473 ಜನ ತೆರಿಗೆದಾರರು 4036 ಸರ್ಕಾರಿ ನೌಕರರಿದ್ದಾರೆ. ಒಟ್ಟು 1,02 509 ಕಾರ್ಡ್ ಗಳನ್ನ ಅನರ್ಹಗೊಳಿಸಲಾಗಿದೆ ಎಂದು ಕೆಎಚ್ ಮುನಿಯಪ್ಪ ಮಾಹಿತಿ ನೀಡಿದರು.
Key words: 1,02,509 BPL cards, ineligible, Food Minister, KH Muniyappa