ರಾಜ್ಯದಲ್ಲಿ11 ಲಕ್ಷ ಪಡಿತರ ಚೀಟಿ ರದ್ದಾಗಿದೆ ಎಂಬ ವಿಚಾರಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿಕ್ರಿಯೆ

ಮಂಗಳೂರು : ರಾಜ್ಯದಲ್ಲಿ 11ಲಕ್ಷ ಪಡಿತರ ಚೀಟಿ ರದ್ದಾಗಿದೆ ಎಂಬ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿಕೆ ವಿಚಾರವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಪಡಿತರ ನೀಡೋದಕ್ಕೆ ಹಣದ ಕೊರತೆ ಇಲ್ಲ. ಪರಿಷ್ಕರಣೆ ಮಾಡಿದಾಗ BPL ಅಲ್ಲದೇ ಇರುವವರನ್ನು APL ಮಾಡಿದ್ದೇವೆ. APL ಗೆ ಹಾಕಿದವರನ್ನು ರದ್ದು ಮಾಡೋದಿಲ್ಲ. ಅರ್ಹರಿಗೆ BPL ಕಾರ್ಡ್ ಕೊಡಲು ತೊಂದರೆ ಇಲ್ಲ. APL ನವರಿಗೆ ಸಬ್ಸಿಡಿ ರೇಟ್ ನಲ್ಲಿ ಕೊಡ್ತಿದ್ದೆವು. ಆದ್ರೆ ಹೆಚ್ಚಿನವರು ತಗೋತಾ ಇರಲಿಲ್ಲ ಎಂದರು.

ಹಾಗಾಗಿ ಸದ್ಯಕ್ಕೆ APL ಗೆ ಸಬ್ಸಿಡಿ ಕೊಡೊದನ್ನು ನಿಲ್ಸಿದ್ದೇವೆ. ಪರಿಷ್ಕರಣೆ ಪೂರ್ತಿ ಆದ ಮೇಲೆ APL ನವರು ಬೇಕೆಂದು ಮುಂದೆ ಬಂದ್ರೆ ಖಂಡಿತಾ ಕೊಡ್ತೇವೆ. ಪರಿಷ್ಕರಣೆ ಆದ ಬಳಿಕ APL ನವರಿಗೆ ಅವಶ್ಯಕತೆ ಇದ್ರೆ ಕೊಡ್ತೇವೆ. ಒಂದೇ ಒಂದು APL ಕಾರ್ಡ್ ರದ್ದು ಆಗಿಲ್ಲ. ದಕ್ಷಿಣಭಾರತದಲ್ಲಿ ಅತೀ ಹೆಚ್ಚು ಕರ್ನಾಟಕದಲ್ಲಿ ಕಾರ್ಡ್ ಇದೆ ಎಂದರು.

6.50 ಕೋಟಿ ಜನ ಇದ್ರು, 4.50 ಕೋಟಿ ಜನರಿಗೆ ಕಾರ್ಡ್ ಕೊಟ್ಟಿದ್ದೇವೆ. ಅರ್ಹರಲ್ಲದವರು ಜಾಸ್ತಿ ಜನ ಇದ್ದಾರೆ ಎಂಬ ಭಾವನೆ ಬಂದಿದೆ. ಪರಿಷ್ಕರಣೆಗೆ ನಿಯಾಮವಳಿ ಹಾಕಿಕೊಂಡಿದ್ದೇವೆ. ಆದಾಯ ತೆರಿಗೆ ಕಟ್ಟುವವರಿಗೆ, ಕಾರು ಇರುವವರಿಗೆಲ್ಲಾ APL. ಈ ಹಿಂದಿನ ಸರ್ಕಾರವೇ ಈ ನಿಯಮ ಮಾಡಿದೆ. ಅಂತವರು ಇದ್ರೆ ಅವರನ್ನು APL ಗೆ ಹಾಕ್ತೇವೆ ಅವರನ್ನು ತೆಗೆದು ಹಾಕಲ್ಲ ಎಂದರು.

ಪರಿಷ್ಕರಣೆ ಮಾಡುವಾಗ ಅರ್ಹರಿಗೆ BPL ಕೊಡುತ್ತೇವೆ. ನಮ್ಮ ಬಳಿ ಇದಕ್ಕಾಗಿ 8000 ಸಾವಿರ ಕೋಟಿ ಹಣ ಇದೆ. ತಿಂಗಳಿಗೆ 650 ಕೋಟಿಯೇ ಖರ್ಚು ಆಗಲ್ಲ. ಕೊಡೋದಕ್ಕೆ ಯಾವುದೇ ತೊಂದರೆ ಇಲ್ಲ. ಸುನೀಲ್ ಕುಮಾರ್ ಅವರಿಗೆ ಮನವರಿಕೆ ಮಾಡುತ್ತೇವೆ. ನನ್ನ ಬಳಿ ಕೇಳಿದ್ರೆ ಹೇಳುತ್ತೇನೆ ಎಂದು ಮಂಗಳೂರಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ನೀಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *