ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದ್ದು, ಇಲಾಖೆಯಿಂದ ವರದಿ ಪಡೆದ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕೊಡವ ಮತ್ತು ಲಂಬಾಣಿ ಭಾಷೆಗೂ ಇದೇ ರೀತಿಯ ಕ್ರಮ ಮಾನ್ಯತೆ ಒದಗಿಸಲು ಆಗ್ರಹವಿದ್ದು, ತುಳು, ಕೊಡವ ಹಾಗೂ ಲಂಬಾಣಿ ಮೂರೂ ಭಾಷೆಗಳ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಬಂದ ಅನಂತರ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.