ರಾಜ್ಯಸಭೆ ಚುನಾವಣೆ: ಶಾಸಕ ಎಸ್. ಟಿ ಸೋಮಶೇಖರ್ ಮಾಜಿ ಸಿಎಂ ಹೆಚ್.ಡಿಕೆ ನಡುವೆ ಟಾಕ್ ವಾರ್. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಬೆಂಗಳೂರು,ಫೆಬ್ರವರಿ,27,2024(www.justkannada.in): ಇಂದು  ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು ಮೂರು ಪಕ್ಷಗಳ ಶಾಸಕರು ತಮ್ಮ ಮತ ಚಲಾಯಿಸುತ್ತಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ನಡುವೆ ಟಾಕ್ ವಾರ್ ನಡೆದಿದೆ.

ಕ್ಷೇತ್ರಕ್ಕೆ ಅನುದಾನ ನೀಡುವವರಿಗೆ, ಅಭಿವೃದ್ಧಿಗೆ ಸಹಕರಿಸುವವರಿಗೆ ನನ್ನ ಮತ ಎಂದು ಹೇಳಿದ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ದ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಮೂರು ವರ್ಷ ಮಂತ್ರಿಯಾಗಿ ಅವರ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಬಿಜೆಪಿಗೆ ಹೋಗಬೇಕಾದರೆ ಕಾರಣ ಕೊಟ್ಟಿದ್ದರು.ಬಿಜೆಪಿ ಸರ್ಕಾರದಲ್ಲಿ ಮೂರು ವರ್ಷ ಮಂತ್ರಿಯಾಗಿ ಎಲ್ಲವನ್ನು ಪಡೆದುಕೊಂಡಿದ್ದಾರೆ  ಮಾಜಿ ಸಿಎಂಗಳಾದ  ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ ಆದರೆ ಇದುವರೆಗೂ ಅವರ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ ಆದರೆ ಕ್ಷೇತ್ರದ ಅಭಿವೃದ್ಧಿ ಶೂನ್ಯ ಎಂದು ಟೀಕಿಸಿದರು.

ಸಿಎಂ ಸ್ಥಾನಕ್ಕಾಗಿ ಅವಕಾಶವಾದಿಯಾಗಿರಲಿಲ್ವಾ..? ಹೆಚ್ ಡಿಕೆಗೆ ಎಸ್ ಟಿಎಸ್ ಚಾಟಿ.

ಇನ್ನು ಮಾಜಿ ಸಿಎಂ ಹೆಚ್.ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಎಸ್.ಟಿ ಸೋಮಶೇಖರ್, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೆಚ್ ಡಿ ಕುಮಾರಸ್ವಾಮಿ ಕೂಡ ಅವಕಾಶವಾದಿ ಅಲ್ವಾ? ಜನಾದೇಶ ಇಲ್ಲ ಅಂತ ಸಿಎಂ ಸ್ಥಾನ ಬಿಡಬಹುದಿತ್ತು ಆದರು ಅವರು ಸಿಎಂ ಸ್ಥಾನ ಬಿಟ್ರಾ? ಎಂದು ಟಾಂಗ್ ನೀಡಿದರು.

Key words: RajyaSabha-Election- MLA- S.T Somashekhar -former CM- H.D.Kumaraswamy

Previous articleಆರ್ಟಿಕಲ್ 370  ಸಿನಿಮಾ ಗಲ್ಫ್ ದೇಶಗಳಲ್ಲಿ ನಿಷೇಧ ̤!
Next articleರಾಜ್ಯಸಭೆ ಚುನಾವಣೆ: ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅಡ್ಡಮತದಾನ.

Font Awesome Icons

Leave a Reply

Your email address will not be published. Required fields are marked *