ರಾತ್ರಿ ಊಟದ ತಕ್ಷಣ ಮಲಗುವ ಅಭ್ಯಾಸ ಇದೆಯೇ, ಹಾಗಾದ್ರೆ ಇದನ್ನು ಓದಿ

ಈಗಿನ ಜೀವನ ಶೈಲಿಯಲ್ಲಿ ಊಟಕ್ಕೆ ಗಮನ ಕೊಡುವುದು ಬಹಳ ಕಡಿಮೆ ಅದರಲ್ಲೂ ಕೆಲಸದ ಜಂಜಾಟದಲ್ಲಿ ತಮ್ಮ ಬಗ್ಗೆ ನೋಡಿಕೊಳ್ಳುವುದೇ ಸವಾಲಾಗಿದೆ. ಬೆಳಗ್ಗೆ ಕೂಡ ಕಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಪೌಷ್ಟಿಕ ಆಹಾರದ ಹೊರದು ಬೇಗ ತಯಾರಾಗುವ ತಿನಿಸುಗಳನ್ನು ಅವಲಂಭಿಸುತ್ತೇವೆ ನಂತರ ಮನೆಗೆ ಹಿಂತಿರುಗುವಾಗಲೇ ಮನದಲ್ಲಿ ಹೋಗಿ ಮಲಗಿದರೆ ಸಾಕು ಅಂದುಕೊಂಡು ಬರುತ್ತೇವೆ ನಂತರ ಬೇಗ ಬೇಗ ಊಟ ಮುಗಿಸಿದ ತಕ್ಷಣ ನಿದ್ರೆಗೆ ಜಾರುತ್ತೇವೆ. ಈ ರೀತಿಯ ಅಭ್ಯಾಸ ಈಗಿನ ಬಹಳಷ್ಟು ಮಂದಿಯಲ್ಲಿದೆ.

ಊಟದ ತಕ್ಷಣ ನಿದ್ರೆಗೆ ಜಾರುವುದರಿಂದ ದುಷ್ಪರಿಣಾಮಗಳುಂಟಾಗಬಹುದು. ಹಾಗಾಗಿ ಈ ಅಭ್ಯಾಸ ಇಂದೇ ಬಾಯ್‌ ಹೇಳಿ. ಏಕೆಂದರೆ ಇದರಿಂದ ನಮ್ಮ ಜೀರ್ಣ ಕ್ರಿಯೆ ಬಹಳಷ್ಟು ತೊಂದರೆ ಆಗುತ್ತದೆ.ತಿಂದ ತಕ್ಷಣ ಮಲಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ‘ಓನ್ಲಿ ಮೈ ಹೆಲ್ತ್’ನಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ, ರಾತ್ರಿ ಊಟ ಮಾಡಿದ ತಕ್ಷಣ ನಿದ್ದೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಜೀರ್ಣ ಕ್ರಿಯೆ ಸಮಸ್ಯೆ,
ಊಟದ ತಕ್ಷಣ ಮಲಗುವುದರಿಂದ ಜೀರ್ಣಕ್ರಿಯೆಗೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ನಿದ್ರೆಗೆ ಜಾರುವುದರಿಂದ ಜೀರ್ಣ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತದೆ. ಹಾಗಾಗಿ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಊತ ಮತ್ತು ಅಜೀರ್ಣದಂಥ ಸಮಸ್ಯೆಗಳು ಶುರುವಾಗುತ್ತವೆ.

ಮಧುಮೇಹ,
ಊಟದ ತಕ್ಷಣ ಮಾಲಗುವುದರಿಂದ ದೇಹದಲ್ಲಿನ ಗ್ಲೂಕೋಸ್​ನ ಪ್ರಮಾಣ ಹೆಚ್ಚಾಗುತ್ತದೆ. ಮಧುಮೇಹ ಮತ್ತು ಬೊಜ್ಜು ಮುಂತಾದ ರೋಗಗಳನ್ನು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಎದೆಯುರಿ ದೂರು,
ತಿಂದ ತಕ್ಷಣ ಮಲಗುವುದರಿಂದ ಎದೆಯುರಿ ಉಂಟಾಗುತ್ತದೆ. ಅಸಿಡಿಟಿ, ಹೊಟ್ಟೆ ಉರಿ, ಎದೆ ಉರಿ ಮುಂತಾದ ದೂರುಗಳೂ ಬರುತ್ತವೆ. ನೀವು ಈಗಾಗಲೇ ಅಸಿಡಿಟಿಯಿಂದ ಬಳಲುತ್ತಿದ್ದರೆ ತಿಂದ ತಕ್ಷಣ ಮಲಗಬಾರದು. ಹಾಗೆ ಇದರಿಂದ ಬೊಜ್ಜಿನ ಸಮಸ್ಯೆ ಕೂಡ ಕಾಡುತ್ತದೆ. ಹಾಗಾಗಿ ಇಂದೇ ಈ ಅಭ್ಯಾಸವನ್ನು ಬಿಡಿ.

Font Awesome Icons

Leave a Reply

Your email address will not be published. Required fields are marked *