ಕೊಚ್ಚಿ: ಖ್ಯಾತ ಹಿನ್ನೆಲೆ ಗಾಯಕಿ ಕೆ ಎಸ್ ಚಿತ್ರಾ ಅವರು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಬೆಂಬಲಿಸುವಂತೆ ಕರೆ ನೀಡಿರುವ ವಿಡಿಯೊಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
ಭಾನುವಾರ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಸಮಾರಂಭದ ಸಮಯದಲ್ಲಿ “ಶ್ರೀ ರಾಮ, ಜಯ ರಾಮ, ಜಯ ಜಯ ರಾಮ” ಎಂದು ಜಪಿಸುವಂತೆ ಚಿತ್ರಾ ಜನರನ್ನು ಒತ್ತಾಯಿಸಿದರು. ಅದೇ ವೇಳೆ ಸಂಜೆ, ಅವರವರ ಮನೆಯಲ್ಲಿ ಎಲ್ಲರೂ ದೀಪಗಳನ್ನು ಬೆಳಗಿಸುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಸಂಜೆಯ ವೇಳೆ ಮನೆಯ ಎಲ್ಲಾ ಭಾಗಗಳಲ್ಲಿ ಐದು ಬತ್ತಿಯ ದೀಪಗಳನ್ನು ಹಚ್ಚಬೇಕು. ದೇವರ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಲೋಕಾ ಸಮಸ್ತಾ ಸುಖಿನೋ ಭವಂತು.” ಎಂದು ಚಿತ್ರಾ ಹೇಳಿದ್ದಾರೆ.
ಈ ಸಮಾರಂಭವನ್ನು ಬೆಂಬಲಿಸಿದ್ದಕ್ಕಾಗಿ ಹಲವಾರು ಜನರು ಚಿತ್ರಾ ಅವರನ್ನು ಟೀಕಿಸಿದರೆ, ಇನ್ನೂ ಅನೇಕರು ಬೆಂಬಲಿಸಿದ್ದಾರೆ.
ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಚಿತ್ರಾ ಅವರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ರೀತಿ ಬರೆದಿದ್ದಾರೆ. “ಅಯೋಧ್ಯೆ ಪ್ರಾಣ ಪ್ರತಿಷ್ಠಾ ದಿನದಂದು ದೀಪ ಬೆಳಗಿಸುವಂತೆ ಮನವಿ ಮಾಡಿದ ಗಾಯಕಿ ಚಿತ್ರಾ ಅವರ ಮೇಲಿ ಎಡ-ಜಿಹಾದಿ ಗುಂಪುಗಳು ಸೈಬರ್ ದಾಳಿ ನಡೆಸಿವ. ಕೇರಳದಲ್ಲಿ ಪಿಣರಾಯಿ ವಿಜಯನ್ ಆಳ್ವಿಕೆಯಲ್ಲಿ ಒಬ್ಬ ಹಿಂದೂ ತನ್ನ ನಂಬಿಕೆಗಳನ್ನು ಸಹ ಅನುಯಾಯಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಕೃತ್ಯದ ಬಗ್ಗೆ ಕಾಂಗ್ರೆಸ್ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ. ನಾವು ಕೇರಳ ಬಿಜೆಪಿ ಕೆಎಸ್ ಚಿತ್ರಾ ಅವರ ಅಚಲ ಬೆಂಬಲಕ್ಕೆ ನಿಂತಿದ್ದೇವೆ. ಗಾಯಕ ಜಿ ವೇಣುಗೋಪಾಲ್ ಕೂಡ ಚಿತ್ರಾ ಅವರನ್ನು ಬೆಂಬಲಿಸಿದರು.
Singer Chitra in support of #PranPratishtha #RamMandir #AyodhyaSriRamTemple 🚩🚩🚩 pic.twitter.com/qqDBeHjXvW
— Souwmiya Dhinesh (@sowmyasarathy) January 13, 2024