ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಎನ್ ಐಎ ತನಿಖೆಗೆ ವಹಿಸಿ- ಸಿಟಿ ರವಿ ಆಗ್ರಹ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

website developers in mysore

ಚಿಕ್ಕಮಗಳೂರು,ಮಾರ್ಚ್,2,2024(www.justkannada.in): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣವನ್ನ ಎನ್ ಐಎ ತನಿಖೆಗೆ ವಹಿಸಿ ಎಂದು ಮಾಜಿ ಸಚಿವ ಸಿಟಿ ರವಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಬಾಂಬ್ ಬ್ಲಾಸ್ಟ್  ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.  ಇದನ್ನ ನೋಡಿದರೇ ಸರಣಿ ಸ್ಪೋಟದ ಸಂಚು ಇರಬಹುದು ಸರ್ಕಾರ ಎನ್ ಐಎಗೆ ವಹಿಸಬೇಕು  ಎಂದು ಒತ್ತಾಯಿಸಿದರು.

ಹಿಂದೆ ಉತ್ತರ ಭಾರತದಲ್ಲಿ ಬಾಂಬ್ ಸ್ಪೋಟದ ಸುದ್ದಿ ಕೇಳುತ್ತಿದ್ದವು.  ಈಗ  ಉತ್ತರ ಭಾರತದ ಭಾಗದಲ್ಲಿ ನಿಂತು ಹೋಗಿದೆ. ಈಗ  ಕರ್ನಾಟಕ ಕೇರಳ ತೆಲಂಗಾಣದಲ್ಲಿ ಕೇಳುತ್ತಿದೆ.  ಇದನ್ನ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು.  ಸರ್ಕಾರ ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದೆ.  ಬ್ರಾಂಡ್ ಬೆಂಗಳೂರಿಗೆ ಬಾಂಬ್ ಆತಂಕ ಎದುರಾಗಿದೆ ಎಂದರು.

ಈ ಹಿಂದೆ ಕೊಪ್ಪ ತೀರ್ಥಹಳ್ಳಿಯಲ್ಲಿ ತರಬೇತಿ ಪಡೆಯುತ್ತಿದ್ದರು.  ಕರ್ನಾಟಕವನ್ನ ಟ್ರೈನಿಂಗ್ ಸೆಂಟರ್ ಮಾಡಿಕೊಂಡಿದ್ದಾರೆ. ಇದನ್ನ ನೋಡಿದರೇ ಸರಣಿ ಸ್ಪೋಟದ ಸಂಚು ಇರಬಹುದು ಭಟ್ಕಳದ ಬಯೋತ್ಪಾದಕರ ನೆಲೆಯಾಗಿದೆ  ಭಯೋತ್ಪಾದಕರು ಪೂರ್ವ ತಯಾರಿ ನಡೆಸುತ್ತಿದ್ದಾರೆ ಎನ್ನಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

Key words: Rameswaram –Café- bomb blast- case – NIA- probe – C.T Ravi

website developers in mysore

Font Awesome Icons

Leave a Reply

Your email address will not be published. Required fields are marked *