ನವದೆಹಲಿ: ಹತ್ತು ವರ್ಷದ ಅವಧಿಯಲ್ಲಿ ಐದನೆ ಬಾರಿ ಪಕ್ಷ ಬದಲಿಸಿರುವ ನಿತೀಶ್ ಕುಮಾರ್, ತಾವು ೨೦೨೨ರಲ್ಲಿ ತೊರೆದು ಬಂದಿದ್ದ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ಸಿಎಂ ಗದ್ದುಗೆಗೇರಿದ್ದಾರೆ.
ತಮ್ಮ ಪಕ್ಷ ಬದಲಾವಣಾ ಸ್ವಭಾವದಿಂದ ರಾಜಕೀಯ ವಲಯದಲ್ಲಿ ʼಪಲ್ಟು ಕುಮಾರ್ʼ ಎಂದು ಹೆಸರು ಪಡೆದಿರುವ ನಿತೀಶ್ ಬಿಹಾರದ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಬಿಜೆಪಿಯ ಇಬ್ಬರನ್ನು ಉಪಮುಖ್ಯಮಂತ್ರಿಗಳಾಗಿ ನೇಮಿಸಲಾಗಿದೆ.
ಮುಂಬರುವ ದಿನಗಳಲ್ಲಿ ಸೀಟು ಹಂಚಿಕೆಯ ವಿಷಯವಾಗಿ ಚರ್ಚೆ ನಡೆಯಲಿದ್ದು, HAM ಪಕ್ಷವನ್ನೂ ಸೇರಿಸಿಕೊಂಡು ಈ ಪ್ರಕ್ರಿಯೆ ನಡೆಯಲಿದೆ.
ಮೂಲಗಳ ಪ್ರಕಾರ, ಜ.೧೩ರಂದು ನಡೆದ ವರ್ಚುವಲ್ ಮೀಟಿಂಗ್ ನ ನಂತರ ಕೋಪದಲ್ಲಿದ್ದ ನಿತೀಶ್, ಮೈತ್ರಿಕೂಟ ಬಿಡುವ ಯೋಚನೆ ಮಾಡಿದ್ದರೆಂದು ತಿಳಿದುಬಂದಿದೆ.
INDIA ಮೈತ್ರಿಕೂಟದಿಂದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ನೇಮಿಸುವಂತೆ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದರು.