ಚಾಮರಾಜನಗರ: ರೈತರು ಮತ್ತು ಮಹಿಳೆಯರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಸದಸ್ಯರು ಹನೂರು ತಾಲೂಕಿನ ಹೂಗ್ಯಾಂನ ಅರಣ್ಯ ಇಲಾಖೆ ಅಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಹನೂರು ತಾಲೂಕಿನ ಹಲವೆಡೆ ವನ್ಯಪ್ರಾಣಿಗಳು ರೈತರು ಬೆಳೆದ ಫಸಲನ್ನ ನಾಶಮಾಡುತ್ತಿವೆ ಇದರಿಂದ ರೈತಾಪಿ ವರ್ಗಕ್ಕೆ ಬಾರಿ ನಷ್ಟವಾಗುತ್ತಿದೇ ಆದುದರಿಂದ ಅರಣ್ಯ ಇಲಾಖೆ ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಇದರಿಂದ ರೈತರ ಫಸಲು ಉಳಿಯುತ್ತೆ ಆದ್ರೆ ಪ್ರಶ್ನಿಸಲು ಹೋದ ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಲ್ಲೆ ನಡೆಸಿರುವುದು ಖಂಡನೀಯ ಎಂದು ರೈತ ಮುಖಂಡ ಗೌಡೇಗೌಡ ಬೇಸರ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಈ ರೀತಿಯಾಗಿ ದೌರ್ಜನ್ಯಕ್ಕೆ ಮುಂದಾಗಬಾರದು ಇಂತಹ ನಡೆಯನ್ನ ರೈತ ಸಂಘ ಖಂಡಿಸುತ್ತದೆ ಎಂದರು.