ರೈತರ ಪ್ರತಿಭಟನೆ ಮಧ್ಯೆ ‘ಪ್ರಧಾನಿ’ಗೆ ಬಹಿರಂಗ ಬೆದರಿಕೆ: ವಿಡಿಯೋ ವೈರಲ್

ನವದೆಹಲಿ: ರೈತರ ಪ್ರತಿಭಟನೆಯ ಮಧ್ಯೆ, ಎಕ್ಸ್‌ ಖಾತೆಯಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊ ವಿವಾದವನ್ನ ಹುಟ್ಟುಹಾಕಿದೆ. ಹೌದು. . ರೈತನೊಬ್ಬ ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾನೆ.

ವೀಡಿಯೊದಲ್ಲಿ, ವ್ಯಕ್ತಿಯು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದು, ಅವರು ಮತ್ತೆ ಪಂಜಾಬ್ಗೆ ಕಾಲಿಡಲು ಧೈರ್ಯ ಮಾಡಿದರೆ, ಭೀಕರ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ ಎಂದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

“ಮೋದಿ ಕಳೆದ ಬಾರಿ ಪಂಜಾಬ್ನಿಂದ ತಪ್ಪಿಸಿಕೊಂಡಿದ್ದರು, ಈ ಬಾರಿ ಅವರು ಪಂಜಾಬ್ಗೆ ಬಂದರೆ ಅವರನ್ನ ಬಿಡುವುದಿಲ್ಲ” ಎಂದು ವ್ಯಕ್ತಿ ಹೇಳುತ್ತಿರುವುದು ವೈರಲ್ ಆಗಿರುವ ವೀಡಿಯೊದಲ್ಲಿ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *