ನವದೆಹಲಿ: ಉತ್ತರಾಖಂಡದಲ್ಲಿ ಲೋಕೋ ಪೈಲಟ್‌ನ ಜಾಗರೂಕತೆಯಿಂದ ಮತ್ತೊಂದು ರೈಲು ಅವಘಡ ತಪ್ಪಿದೆ. ಬಿಲಾಸ್‌ಪುರ್ ಹಾಗೂ ರುದ್ರಪುರ ನಡುವೆ ಸಂಚರಿಸುತ್ತಿದ್ದ ನೈನಿ ಜನ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಅಡ್ಡಲಾಗಿ ಕೆಲವು ಕಿಡಿಗೇಡಿಗಳು 6 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಹಳಿಯ ಮೇಲೆ ಇಟ್ಟಿದ್ದರು.
ಇದು ಗಮನಕ್ಕೆ ಬಾರದೇ ಹೋಗಿದ್ದರೆ ಭಾರಿ ದುರಂತವೇ ಸಂಭವಿಸುತ್ತಿತ್ತು. ಆದರೆ, ಲೋಕೋ ಪೈಲಟ್‌ನ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ. ಭಾರತೀಯ ರೈಲ್ವೇ ಅಧಿಕಾರಿಗಳ ಪ್ರಕಾರ, ರೈಲು ಸಂಖ್ಯೆ 12091ರ ಲೋಕೋ ಪೈಲಟ್, ಹಳಿಯ ಮೇಲೆ ಕಬ್ಬಿಣದ ಕಂಬ ಬಿದ್ದಿರುವುದನ್ನು ದೂರದಿಂದಲೇ ಗಮನಿಸಿ, ತಕ್ಷಣ ತುರ್ತು ಬ್ರೇಕ್ ಹಾಕಿ ರೈಲು ನಿಲ್ಲಿಸಿ, ಭಾರಿ ದುರಂತವನ್ನು ತಪ್ಪಿಸಿದ್ದಾರೆ. ರೈಲು ನಿಲ್ಲಿಸಿದ ಬಳಿಕ ಕಬ್ಬಿಣದ ಕಂಬವನ್ನು ತೆರವುಗೊಳಿಸಿ, ತಮ್ಮ ಪ್ರಯಾಣವನ್ನು ಮುಂದುವರಿಸಿದರು ಎಂದು ತಿಳಿದುಬಂದಿದೆ.