́ಲಿಯೋ’ ಸಿನಿಮಾ ಒಟಿಟಿ ಬಿಡುಗಡೆಗೆ ದಿನಾಂಕ ಪಿಕ್ಸ್

ವಿಜಯ್ ಅಭಿನಯಿಸಿದ ‘ಲಿಯೋ’ ಸಿನಿಮಾ ದಸರಾ ಪ್ರಯುಕ್ತ ಅಕ್ಟೋಬರ್ 19ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದರು.

ಈ ಸಿನಿಮಾವು 550 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸದ್ಯ ಈ ಚಿತ್ರ ಒಟಿಟಿ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಹಲವು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡಿತ್ತು. ನೆಟ್​ಫ್ಲಿಕ್ಸ್ ಕಡೆಯಿಂದಲೇ  ಅಧಿಕೃತವಾದ ಮಾಹಿತಿ ಸಿಕ್ಕಿದೆ.

‘ಲಿಯೋ’ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ನೆಟ್​ಫ್ಲಿಕ್ಸ್ ಮಾಹಿತಿ ನೀಡಿದೆ. ನವೆಂಬರ್ 21ರಿಂದ ಚಿತ್ರ ಸ್ಟ್ರೀಮ್ ಆಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ನವೆಂಬರ್ ತಿಂಗಳಲ್ಲಿ, ಒಟಿಟಿಯಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳ ಪಟ್ಟಿಯನ್ನು ನೆಟ್​ಫ್ಲಿಕ್ಸ್ ಬಹಿರಂಗಪಡಿಸಿದೆ. ಅದರ ಭಾಗವಾಗಿ ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ಸ್ಟ್ರೀಮಿಂಗ್ ಡೇಟ್ ಕೂಡ ಬಹಿರಂಗವಾಗಿದೆ.

Font Awesome Icons

Leave a Reply

Your email address will not be published. Required fields are marked *